ಗಂಗೊಳ್ಳಿ, ಜೂನ್ 8: ಬದುಕಿನಲ್ಲಿ ಬರವಣಿಗೆಯಷ್ಟು ಖುಷಿ ಕೊಡುವ ಮತ್ತೊಂದು ದೊರಕದು. ನೋವುಗಳನ್ನು ನಲಿವಾಗಿಸುವ ಶಕ್ತಿ ಸಾಹಿತ್ಯಕ್ಕಿದೆ. ಸೂಕ್ಷ್ಮ ಸಂವೇದನೆಯಲ್ಲಿ ಹುಟ್ಟಿಕೊಂಡ ಬರವಣಿಗೆ ಹೆಚ್ಚು ಪ್ರಬಲವಾಗಿರುತ್ತದೆ. ವಿದ್ಯಾರ್ಥಿ ಜೀವನದಲ್ಲಿಯೇ ಬರವಣಿಗೆಯ ಹವ್ಯಾಸಗಳನ್ನು ಬೆಳೆಸಿಕೊಂಡರೆ ಮುಂದೆ ಆ ವಿದ್ಯಾ ಸಂಸ್ಥೆ ನಿಮ್ಮ ಬಗೆಗೆ ಹೆಮ್ಮೆ ಪಡುವಂತಾಗುತ್ತದೆ ಎಂದು ಖ್ಯಾತ ಕತೆಗಾರರು, ಲಲಿತ ಪ್ರಬಂಧ ಬರಹಗಾರರು ಆಗಿರುವ ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ ಹೇಳಿದರು. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ದೃಷ್ಟಿ ವಾರ್ಷಿಕ ಸಂಚಿಕೆ ಅನಾವರಣ ಮಾಡಿ ಅವರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಕವಿತ ಎಂ. ಸಿ. ಅಧ್ಯಕ್ಷತೆ ವಹಿಸಿದ್ದರು.
ಜಿ.ಎಸ್.ವಿ.ಎಸ್. ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಕಾಶೀನಾಥ್ ಪೈ, ಕಾಲೇಜಿನ ಕಾರ್ಯದರ್ಶಿ ಸದಾಶಿವ ನಾಯಕ್ ಎನ್., ಸಂಪಾದಕ ಬಳಗದ ಥಾಮಸ್ ಪಿ.ಏ., ನಾರಾಯಣ ಇ ನಾಯ್ಕ್ ಉಪಸ್ಥಿತರಿದ್ದರು.
ಕಾರ್ಯನಿರ್ವಾಹಕ ಸಂಪಾದಕರಾದ ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಅನನ್ಯ ಪ್ರಾರ್ಥಸಿ, ನೇಹ ಸ್ವಾಗತಿಸಿ, ಶ್ರೇಯ ವಂದಿಸಿದರು. ವಸುಧಾ ಪರಿಚಯಿಸಿ, ನಿಶಾ ಕಾರ್ಯಕ್ರಮ ನಿರೂಪಿಸಿದರು.