ಕೋಟ, ಜೂನ್ 7: ಹೊಸತನದ ಚಿಂತನೆಗಳು ಕಾರ್ಯರೂಪಕ್ಕೆ ತಂದಾಗ ಸಾಧನೆಗಳು ಸಾಧ್ಯ. ಅವಕಾಶಗಳ ಸದ್ಭಳಕೆ ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ದಾರಿ ಸುಗಮವಾಗುತ್ತದೆ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಗಾಗಿ 25 ಗಂಟೆ ನಿರಂತರ ವ್ಯಕ್ತಿತ್ವ ವಿಕಸನ ಟ್ರೈನಿಂಗ್ ಮ್ಯಾರಥಾನ್ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಎಂದು ಜೆ.ಸಿ.ಐ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಅವರು ಹೇಳಿದರು. ಅವರು ಕೋಟದ ಕಾರಂತ ಥೀಮ್ ಪಾರ್ಕ್ ನಲ್ಲಿ ಜೆ.ಸಿ.ಐ ಕಲ್ಯಾಣಪುರ, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ ಇವರ ಆಶ್ರಯದಲ್ಲಿ ಶಿಕ್ಷಕ -ಬರಹಗಾರ ಜೆ.ಸಿ ನರೇಂದ್ರ ಕುಮಾರ್ ಕೋಟ ಸಾರಥ್ಯದಲ್ಲಿ 25 ಗಂಟೆಗಳ ನಿರಂತರ ಆನ್ ಲೈನ್ ವ್ಯಕ್ತಿತ್ವ ವಿಕಸನ ಟ್ರೈನಿಂಗ್ ಮ್ಯಾರಥಾನ್ ಇಂಡಿಯ ಬುಕ್ ಆಫ್ ರೆಕಾರ್ಡ್ ದಾಖಲೆಗಾಗಿ ರಾಷ್ಟ್ರೀಯ ತರಬೇತಿ ಗುಣಗಾನದೊಂದಿಗೆ ಮನ್ವಂತರ-2023 (ಸಾಧನೆಯ ಮೈಲಿಗಲ್ಲು) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ಜೆ.ಸಿ.ಐ ಕಲ್ಯಾಣಪುರ ಅಧ್ಯಕ್ಷೆ ಅನಿತಾ ನರೇಂದ್ರ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ತರಬೇತಿ ವಿಭಾಗದ ಮುಖ್ಯಸ್ಥರಾದ ಪ್ರದೀಪ್ ಬಾಕಿಲ, ವಲಯ ಉಪಾಧ್ಯಕ್ಷರಾದ ಜಯಶ್ರೀ ಮಿತ್ರಕುಮಾರ್, ಕಾರ್ಯಕ್ರಮದ ಪ್ರಾಜೆಕ್ಟ್ ನಿರ್ದೇಶಕ ಮಿತ್ರ ಕುಮಾರ್, ಪ್ರಧ್ವೀಶ್ ಭಟ್, ನಿರಂತರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಸತೀಶ್ ವಡ್ಡರ್ಸೆ ಹಾಗೂ ಜ್ಯೋತಿ ಸಾಲಿಗ್ರಾಮ ನಿರೂಪಿಸಿದರು.