ಉಡುಪಿ, ಜೂನ್ 6: ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಹಾಗೂ ಗುಂಡಿಬೈಲು ಹಿರಿಯ ಪ್ರಾಥಮಿಕ (ಕನ್ನಡ ಮತ್ತು ಆಂಗ್ಲ ಮಾದ್ಯಮ) ಶಾಲೆಯ ಸಹಯೋಗದಲ್ಲಿ ಜೂನ್ 5ರಂದು ಗುಂಡಿಬೈಲು ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಗಿಡ ನೆಡುವುದರ ಮೂಲಕ ಉದ್ಘಾಟನೆ ನೆರವೇರಿಸಿ ಪರಿಸರ ಕಾಳಜಿಯ ಕುರಿತು ಮಾತನಾಡಿದರು. ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿಯ ವಿಶೇಷ ಕಾರ್ಯಕ್ರಮ “ನಮ್ಮ ನಡೆ ಹಸಿರಿನೆಡೆ” ಅಭಿಯಾನಕ್ಕೆ ಮುಖ್ಯ ಅತಿಥಿಗಳಾದ ಡಾ. ವಿಜಯೇಂದ್ರ ವಸಂತ್ ಚಾಲನೆ ನೀಡಿ ಮಾಡಿ ಜೀವನ ಧರ್ಮ ಮತ್ತು ಪರಿಸರ ಪ್ರೇಮದ ವಿಚಾರಪೂರ್ಣ ಮಾಹಿತಿ ನೀಡಿದರು.
ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿಯ ಅಧ್ಯಕ್ಷರಾದ ಗಣೇಶ್ ನಾಯ್ಕ್ ವಿಶ್ವ ಪರಿಸರ ದಿನಾಚರಣೆಯ ಕೂಪನ್ ಬಿಡುಗಡೆ ಮಾಡಿ ಜೆಸಿಐ ಮೂಲಕ ಕೈಗೊಂಡ ಈ ಅಭಿಯಾನ ವಚನಬದ್ದವಾಗಿ ಪಾಲಿಸಿಕೊಂಡು ಬರುವುದಾಗಿ ತಿಳಿಸಿದರು. ಸಂಸ್ಥಾಪಕ ಅಧ್ಯಕ್ಷರಾದ ಜೆಎಫ್ ಡಿ.ಎಂ ಎನ್. ನಾಯಕ್ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಪೂರ್ವಾಧ್ಯಕ್ಷರು, ನಿವೃತ್ತ ಸೈನಿಕ ಜೆ.ಎಫ್.ಎಂ ಕೇಶವ ಆಚಾರ್ಯ ಇವರು ಮಾತನಾಡಿ ಮಕ್ಕಳಲ್ಲಿ ಕಲಿಕೆಯ ಜೊತೆ ಪರಿಸರದ ಜವಾಬ್ದಾರಿಯ ಅರಿವು ಇರಬೇಕೆಂದರು. ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಉಡುಪ ಹಾಗೂ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಸಿದ್ದಪ್ಪ ಎಂ.ಎನ್ ಪರಿಸರ ಜಾಗೃತಿಯ ಅರಿವು ಮೂಡಿಸಿದರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿಗಳಾದ ಚಂದ್ರಶೇಖರ ಆಚಾರ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಂ. ಪ್ರಶಾಂತ್ ಆಚಾರ್ಯ, ಸತೀಶ್ ನಾಯ್ಕ್, ಸತೀಶ್ ಆಚಾರ್ಯ, ಪ್ರಶಾಂತ್, ಅನಿಲ್ ಕುಮಾರ್, ದೀಪಕ್, ಹರ್ಷಿತ್, ಪ್ರತಿಮಾ ಆಚಾರ್ಯ, ಪ್ರಾರ್ಥನಾ, ಮಾಲತಿ ಆಚಾರ್ಯ, ಜಯಶ್ರೀ ಕೇಶವ್, ವೀಣಾ ನಾಯಕ್ ಉಪಸ್ಥಿತರಿದ್ದರು. ಉಮೇಶ್ ಆಚಾರ್ಯ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕಿ ಮಮತಾ ವಂದಿಸಿದರು.