ಉಡುಪಿ, ಜೂನ್ 5: ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಸುವರ್ಣ ಎಂಟರ್ ಪ್ರೆಸಸ್, ರೋಟರಿ ರೋಯಲ್ ಬ್ರಹ್ಮಾವರ, ಕ.ಸಾ.ಪ ಉಡುಪಿ ತಾಲೂಕು ಇದರ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ಸೋಮವಾರ ಡಾ. ಎ.ವಿ ಬಾಳಿಗಾ ಸಮೂಹ ಸಂಸ್ಥೆ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣ, ಪರಿಸರ ಉಳಿದರೆ ನಾವು ಉಳಿಯಬಹುದು. ಇಂದು ಪರಿಸರ ನಾಶ ವಿವಿಧ ಕಾರಣಗಳಿಂದ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ವರ್ಷಪೂರ್ತಿ ಗಿಡ ನೆಡುವ ಕಾರ್ಯ ನಡೆಯಬೇಕು ಎಂದರು.
ಜಯಂಟ್ಸ್ ಫೆಡರೇಶಯನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಕ.ಸಾ.ಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ., ರೋಟರಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಚರಣ್ ಶೆಟ್ಟಿ, ಜಯಂಟ್ಸ್ ಕಾರ್ಯದರ್ಶಿ ಮಿಲ್ಟನ್ ಒಲಿವೇರಾ, ದಯಾನಂದ ಪೂಜಾರಿ, ವನಿತಾ, ರೊನಾಲ್ಡ್, ಶ್ರೀನಾಥ್ ಕೋಟ, ಅರಣ್ಯ ಅಧಿಕಾರಿ ಹರೀಶ್, ಎ.ವಿ ಬಾಳಿಗಾ ಆಸ್ಪತ್ರೆಯ ಕರುಣಾಕರ್ ಮುಂತಾದವರು ಉಪಸ್ಥಿತರಿದ್ದರು. ಕಸಾಪ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.