ಬ್ರಹ್ಮಾವರ, ಜೂನ್ 2: ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಹಾಗೂ ಎನ್. ಎಸ್. ಎಸ್. ಘಟಕ ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ಎನ್. ಎಸ್. ಎಸ್ ಸ್ವಯಂಸೇವಕರಿಗೆ ಮಳೆ ನೀರು ಕೊಯ್ಲು ಮತ್ತು ಸಮರ್ಥ ಬಳಕೆ ಕಾರ್ಯಕ್ರಮ ಕಾಲೇಜಿನ ಮಿನಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಕೆ. ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ರತ್ನಶ್ರೀ ಜೊಸೆಫ್ ಜಿ ಎಂ ರೇಬೆಲ್ಲೋ ಆಗಮಿಸಿ ಮಳೆ ನೀರಿನ ಕೊಯ್ಲು ಹಾಗೂ ನೀರನ್ನು ಬಳಸುವ ಬಗ್ಗೆ ಮಾಹಿತಿ ನೀಡಿದರು. ಕೃಷಿ ಕೇಂದ್ರ ಬ್ರಹ್ಮಾವರ ಹಿರಿಯ ವಿಜ್ಞಾನಿ ಡಾ. ಧನಂಜಯ್, ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಬ್ರಹ್ಮಾವರ ಎನ್. ಎಸ್. ಎಸ್. ಘಟಕದ ಯೋಜನಾಧಿಕಾರಿಗಳಾದ ರಘುರಾಮ್ ಶೆಟ್ಟಿ ಹಾಗೂ ಮಮತಾ ಅಮ್ಮನ್ನ ಉಪಸ್ಥಿತರಿದ್ದರು.