ಕುಂದಾಪುರ, ಮೇ 30: ಹೊಸ ಶಿಕ್ಷಣ ನೀತಿಯ ಪಠ್ಯಕ್ರಮಕ್ಕೆ ಅನ್ವಯಿಸಿ ಪದವಿ ಹಂತದ 3/4ನೇ ಸೆಮಿಸ್ಟರ್ ಗಳಿಗೆ ಕಡ್ಡಾಯ ಅಧ್ಯಯನದ ವಿಷಯವಾದ ‘ಭಾರತದ ಸಂವಿಧಾನ’ ಈ ಅಧ್ಯಯನಕ್ಕೆ ಪುಾರಕವಾಗಿ ರಚಿತವಾದ ‘ಭಾರತದ ಸಂವಿಧಾನ’ ಅನ್ನುವ ಕೃತಿಯನ್ನು ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ರಾಜಕೀಯಶಾಸ್ತ್ರ ಪ್ರಾಧ್ಯಾಪಕ ಪ್ರವೀಣ್ ಮೊಗವೀರ ಮತ್ತು ಉಡುಪಿ ಎಂಜಿಎಂ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಸ್ಪೂರ್ತಿ ಎಸ್.ಫರ್ನಾಂಡೀಸ್ ಇವರು ಬರೆದಿರುವ ಪುಸ್ತಕ ಲೇೂಕಾರ್ಪಣಾ ಕಾರ್ಯಕ್ರಮ ಡಾ. ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ನಡೆಯಿತು.
ಕೃತಿ ಬಿಡುಗಡೆ ಮಾಡಿದ ಉಡುಪಿ ಎಂ.ಜಿ.ಎಂ.ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಮಾತನಾಡಿ, ಭಾರತೀಯ ಸಂವಿಧಾನ ಅಧ್ಯಯನ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಇದೊಂದು ಮುಖ್ಯ ಆಕರ ಗ್ರಂಥವಾಗಿದ್ದು ಆಂಗ್ಲ ಭಾಷಾ ಅವತರಣಿಕೆಯಲ್ಲಿ ಪ್ರಕಟವಾಗಿರುವ ಕೃತಿ ಹೆಚ್ಚಿನ ಓದುಗರ ಮನಸೆಳೆಯುವ ಸುಲಲಿತ ಕೃತಿ ಎಂದು ಲೇಖಕರನ್ನು ಅಭಿನಂದಿಸಿದರು.
ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಉಪ ಪ್ರಾಂಶುಪಾಲ ಪ್ರೊ. ಕೆ.ಚೇತನ್, ಕೃತಿಕಾರರಾದ ಪ್ರೊ. ಪ್ರವೀಣ್ ಮೊಗವೀರ, ಸ್ಪೂರ್ತಿ ಎಸ್. ಫರ್ನಾಂಡೀಸ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ರಕ್ಷಿತ ರಾವ್, ದೀಪಾ ಹೆಗ್ಡೆ ಹಾಗೂ ವಿದ್ಯಾರ್ಥಿ ಪ್ರತಿನಿಧಿ ವಿಘ್ನೇಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.