ಪುತ್ತೂರು, ಮೇ 19: ಪುತ್ತೂರು ಬ್ಯಾನರ್ ಅಳವಡಿಕೆಯ ನಂತರ ಸಂಭವಿಸಿದ ಹಿಂದೂ ಕಾರ್ಯಕರ್ತರ ಮೇಲೆ ನಡೆದ ಅಮಾನವೀಯ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಆಸ್ಪತ್ರೆಗೆ ವಿಜಯಪುರ ನಗರ ಶಾಸಕ, ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಶುಕ್ರವಾರ ಭೇಟಿ ನೀಡಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ಜೊತೆಗೆ ಮಾತನಾಡಿ ಆರೋಗ್ಯ ವಿಚಾರಿಸಿದರು.
ಪುತ್ತೂರಿನಲ್ಲಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಯ ಬಗ್ಗೆ ಪುತ್ತೂರಿನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅರುಣ್ ಪುತ್ತಿಲ ಅವರು ಯತ್ನಾಳ್ ರವರಿಗೆ ವಿವರಿಸಿದರು.
ಬಳಿಕ ಮಾತನಾಡಿದ ಯತ್ನಾಳ್, ಘಟನೆಯನ್ನು ಖಂಡಿಸಿದರು. ಒಳಗಿನ ಸತ್ಯ ನಮಗೆ ಗೊತ್ತಿದೆ. ಎಲ್ಲಿ ಮುಟ್ಟಿಸಬೇಕೋ ಅಲ್ಲಿಗೆ ಮುಟ್ಟಿಸುತ್ತೇನೆ. ಹಲ್ಲೆಗೊಳಗಾದವರಿಗೆ ವಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂಪಾಯಿ ನೀಡುತ್ತಿದ್ದೇನೆ. ಇಂತಹ ಘಟನೆ ಪೊಲೀಸ್ ಇಲಾಖೆಗೆ ಗೌರವ ತರುವಂತದ್ದಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಎಲ್ಲರಿಗೂ ಅರಿವಾಗಿದೆ. ಹಲ್ಲೆ ನಡೆಸಿದವರನ್ನು ಅಮಾನತು ಮಾಡಬೇಕು ಎಂದರು.