ಉದ್ಯಾವರ, ಮೇ 15: ಉಡುಪಿಯ ಉದ್ಯಾವರದ ಪಿತ್ರೋಡಿಯ ಮೋಹನ್ ಸಾಲ್ಯಾನ್ ರವರ ಗದ್ದೆಯ ಪಕ್ಕದಲ್ಲಿ ಕಲಾಯಿಬೈಲ್ ನ ಬಳಿ ದಟ್ಟ ಕಾಡಿನ ಬಳಿ ಈ ಶಿಲಾಶಾಸನ ಇವರ ಮಾಹಿತಿಯನ್ನು ಸ್ಥಳೀಯರಾದ ಆಟೋ ಚಾಲಕರಾದ ಉಪೇಂದ್ರ ಮೆಂಡನ್ ಅವರ ಮಾಹಿತಿ ನೀಡಿರುವ ಹಿನ್ನೆಲೆಯ ಮೇರೆಗೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ರಾಜೇಶ್ ಪ್ರಭು ಪರ್ಕಳ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿಯ ಪ್ರದೇಶವನ್ನು ಶಾಸನ ಪರಿಶೀಲನೆ ನಡೆಸಿದಾಗ ಶಾಸನ ಇರುವುದು ಪತ್ತೆಯಾಗಿದೆ.
ಶಾಸನದಲ್ಲಿ ಸೂರ್ಯ, ಚಂದ್ರ, ಮಧ್ಯೆ ದೊಡ್ಡ ಗಾತ್ರದ ಲಿಂಗ ಕುಳಿತುಕೊಂಡಿರುವ ಬಸವ ಜೊತೆಗೆ ಕೆಳಗಡೆ ಬರಹ ಇರುವುದು ಗೋಚರಿಸುತ್ತದೆ. ಎರಡು ಅಡಿ ಅಗಲ ಐದು ಅಡಿ ಎತ್ತರ ಈ ಶಾಸನ ನೆಲದಲ್ಲಿ ಹುದುಗಿದೆ. ಪಕ್ಕದಲ್ಲಿ ಎರಡು ನಾಗಬನ ಇದೆ ಶಾಸನದ ಎದುರುಗಡೆ ವಿಶಾಲವಾದ “ಪೇರಳೆ” ನಾಮಾಂಕಿತ ಡೊಡ್ಡ ಕೆರೆ ಇದೆ.
ಪಕ್ಕದಲ್ಲಿ ದತ್ತಾತ್ರೇಯಯ ಭಜನಾ ಮಂಡಳಿಯ ವಾರ್ಷಿಕೋತ್ಸವದಂದು ಓಕುಳಿಯಾಡಿ ಈ ಪೇರಳೆ ಕೆರೆಯಲ್ಲಿ ಸ್ನಾನ ಮಾಡುವುದು ವಾಡಿಕೆ. ನಾಗಬನದಲ್ಲಿ ಸೌರಮಾನ ಯುಗಾದಿಯಂದು ಸ್ಥಳೀಯರು ಬಂದು ಪೂಜೆ ಮಾಡುತ್ತಾರೆ. ಈ ಭಾಗದಲ್ಲಿ ಶಾಸನ ಇಲ್ಲಿರೋ ಬಗ್ಗೆ ಸ್ಥಳೀಯರಿಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ ಎಂದು ತಿಳಿದುಬಂದಿದೆ. ಸಂಶೋಧಕರಿಗೆ ಮಾಹಿತಿ ನೀಡಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.