Friday, September 20, 2024
Friday, September 20, 2024

ತೆಂಕನಿಡಿಯೂರು ಕಾಲೇಜು: ರೋವರ್ಸ್ ರೇಂಜರ್ಸ್ ಮಾಹಿತಿ ಕಾರ್ಯಗಾರ

ತೆಂಕನಿಡಿಯೂರು ಕಾಲೇಜು: ರೋವರ್ಸ್ ರೇಂಜರ್ಸ್ ಮಾಹಿತಿ ಕಾರ್ಯಗಾರ

Date:

ತೆಂಕನಿಡಿಯೂರು, ಮೇ 12: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ರೋವರ್ಸ್ ರೇಂಜರ್ಸ್ ಘಟಕದ ಆಶ್ರಯದಲ್ಲಿ ರೋವರ್ಸ್ ರೇಂಜರ್ಸ್ ಮಾಹಿತಿ ಕಾರ್ಯಗಾರ ಹಾಗೂ ಪಕ್ಷಿಗಳಿಗೆ ನೀರುಣಿಸುವ ಪರಿಸರ ಕಾಳಜಿಯ ಕಾರ್ಯಕ್ರಮ ನಡೆಯಿತು. ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಇದರ ಉಡುಪಿ ಜಿಲ್ಲಾ ಸಂಸ್ಥೆಯ ಸ್ಕೌಟ್ಸ್ ಸಹಾಯಕ ಆಯುಕ್ತರಾದ ವಿತೇಶ್ ಕಾಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಅವರು ಸ್ಕೌಟ್ ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಮಾತನಾಡುತ್ತಾ, ಸ್ಕೌಟಿಂಗ್ ಯುವಜನತೆಯ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಶಿಸ್ತು, ಸಮಯಪ್ರಜ್ಞೆ, ಸಹಜೀವನ, ಪರಿಸರ ಪ್ರೀತಿ ಇಂತಹ ಹಲವಾರು ಅಂಶಗಳನ್ನು ಅಳವಡಿಸಿಕೊಂಡಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ. ಕೆ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಅಧ್ಯಯನದ ಸಂದರ್ಭದಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ಹಾಗೂ ಅನುಭವಗಳನ್ನು ಪಡೆದುಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದಾಗ ದೇಶದ ಅಭಿವೃದ್ಧಿ ಸಾಧ್ಯ. ಕಾಲೇಜಿನ ರೋವರ್ ರೇಂಜರ್ ವಿದ್ಯಾರ್ಥಿಗಳು ಪರಿಸರ ಪ್ರೇಮ ಹಾಗೂ ಸಮಾಜ ಸೇವೆಗೆ ಹೆಚ್ಚಿನ ಪ್ರಾಧ್ಯಾನತೆ ನೀಡುತ್ತಿರುವುದು ಅಭಿನಂದನಾರ್ಹ ಎಂದರು.

ಕಾರ್ಯಗಾರದ ನಂತರ ಬಿಸಿಲಿನ ಬೇಗೆಯ ಸಂದರ್ಭದಲ್ಲಿ ಬಸವಳಿವ ಪಕ್ಷಿಗಳಿಗೆ ಕುಡಿಯುವ ನೀರು ಹಾಗೂ ಅಹಾರದ ವ್ಯವಸ್ಥೆಯನ್ನು ಕಾಲೇಜಿನ ವಟಾರದಲ್ಲಿ ಸ್ಥಾಪಿಸಲಾಯಿತು. ಆ ಮೂಲಕ ರೊವರ್ ರೇಂಜರ್ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ಮಹತ್ವವನ್ನು ತಿಳಿಸಲಾಯಿತು. ಕಾಲೇಜಿನ ರೋವರ್ಸ್ ಸ್ಕೌಟ್ ಲೀಡರ್ ಡಾ. ಉದಯ ಶೆಟ್ಟಿ ಕೆ ಕಾರ್ಯಕ್ರಮವನ್ನು ಸಂಯೋಜಿಸಿದರು. ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಬಿಂದು ಟಿ., ಡಾ. ಮೇವಿ ಮಿರಾಂದ ಹಾಗೂ ಡಾ. ರಘು ನಾಯ್ಕ್ ಉಪಸ್ಥಿತರಿದ್ದರು. ರೋವರ್ ವಿದ್ಯಾರ್ಥಿ ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ವಲ್ ಜತ್ತನ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!