Friday, September 20, 2024
Friday, September 20, 2024

ಉಡುಪಿ: ಸಿಡಿಲು, ಗಾಳಿ ಮಳೆಗೆ ಮನೆಗಳಿಗೆ ಹಾನಿ

ಉಡುಪಿ: ಸಿಡಿಲು, ಗಾಳಿ ಮಳೆಗೆ ಮನೆಗಳಿಗೆ ಹಾನಿ

Date:

ಉಡುಪಿ, ಮೇ 12: ಉಡುಪಿ ಜಿಲ್ಲೆಯಾದ್ಯಂತ ಗುರುವಾರ ಸುರಿದ ಮಳೆಗೆ ಕೆಲವೆಡೆ ಹಾನಿಯುಂಟಾಗಿದೆ. ಉಡುಪಿಯ ಪೆರ್ಡೂರು ಗ್ರಾಮದ ಶಾಲಿನಿ, ಸುಗಂಧಿ, ಗುಲಾಬಿ ಎಂಬವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿದೆ. ಕಾಪು ತಾಲೂಕಿನ ಪಡು ಗ್ರಾಮದ ವಿಜಯ ಕೋಟ್ಯಾನ್ ಎಂಬವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿದೆ.

ಬ್ರಹ್ಮಾವರ ತಾಲೂಕಿನ ಆರೂರಿನ ಕಾವೇರಿ ಎಂಬವರ ಮನೆಯ ಮೇಲೆ ಗಾಳಿ ಮಳೆಯಿಂದ ಮರಬಿದ್ದು ಭಾಗಶಃ ಹಾನಿಯಾಗಿದೆ. ಕಾರ್ಕಳದ ಕೌಡೂರು ಗ್ರಾಮದ ಕೇಶವ ಶೆಟ್ಟಿ ಎಂಬವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ. ಉಡುಪಿಯ ಬೆಳ್ಳಂಪಳ್ಳಿ ರಮಣಿ ಎಂಬವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿದೆ. ಉಡುಪಿಯ 41 ಶಿರೂರು ಗ್ರಾಮದ ಅಪ್ಪಿ ಶೇರಿಗಾರ್ತಿ ಮನೆಯ ಮೇಲೆ ಗಾಳಿ ಮಳೆಯಿಂದ ಮರಬಿದ್ದು ಭಾಗಶಃ ಹಾನಿಯಾಗಿದೆ. ಉಡುಪಿಯಲ್ಲಿ 44.1 ಮಿಮೀ, ಬ್ರಹ್ಮಾವರದಲ್ಲಿ 11.2, ಕಾಪು-44.6, ಕಾರ್ಕಳ- 12.7, ಹೆಬ್ರಿ- 9.4 ಮಿಮೀ ಮಳೆಯಾಗಿದೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಗಾಳಿ ಮಳೆಗೆ ಕಾಪು ತಾಲೂಕು ಮಲ್ಲಾರು ಗ್ರಾಮದ ಸ್ವಾಗತ್ ನಗರ ಎಂಬಲ್ಲಿ ಚಲಿಸುತ್ತಿದ್ದ ರಿಕ್ಷಾದ ಮೇಲೆ ಬೃಹತ್ ಮರ ಬಿದ್ದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪಾದೂರು ಗ್ರಾಮದ ನಿವಾಸಿ ಪುಷ್ಪಾ (49) ಹಾಗೂ 108 ಕಳತ್ತೂರು ಗ್ರಾಮದ ಕೃಷ್ಣ ಮುಖಾರಿ (53) ಎಂಬವರು ಮೃತಪಟ್ಟಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...
error: Content is protected !!