Friday, November 15, 2024
Friday, November 15, 2024

ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿದ್ಯಾರ್ಥಿಗಳಿಂದ ಉತ್ಪನ್ನಗಳ ಮಾರುಕಟ್ಟೆ ಕಾರ್ಯಕ್ರಮ

ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿದ್ಯಾರ್ಥಿಗಳಿಂದ ಉತ್ಪನ್ನಗಳ ಮಾರುಕಟ್ಟೆ ಕಾರ್ಯಕ್ರಮ

Date:

ತೆಂಕನಿಡಿಯೂರು, ಮೇ 6: ಬದಲಾಗುತ್ತಿರುವ ಕಾಲಮಾನದಲ್ಲಿ ತಂತ್ರಜ್ಞಾನ ಉತ್ಪನ್ನ, ಗ್ರಾಹಕರ ಆಯ್ಕೆ ಮತ್ತು ಮಾರುಕಟ್ಟೆಯಲ್ಲಿನ ಸ್ಪರ್ಧೆ, ಉದ್ಯಮದಲ್ಲಿನ ಮಾರುಕಟ್ಟೆ ನೀತಿ, ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳು ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವಲ್ಲಿ ಪ್ರಭಾವ ಬೀರುತ್ತವೆ. ಪ್ರತಿಯೊಬ್ಬ ಉದ್ಯಮಿಯು ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳು ಗ್ರಾಹಕರಿಂದ ತಿರಸ್ಕೃತಗೊಳ್ಳಬಹುದೆಂಬ ಭಯ ಮತ್ತು ಅದರ ಪೂರ್ವ ತಯಾರಿಯನ್ನು ಹೊಂದಿರಬೇಕು ಎಂದು ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಹೇಳಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ ಅಂತರ್ ತರಗತಿ ಮ್ಯಾನೇಜ್ಮೆಂಟ್ ಫೆಸ್ಟ್ “ಇಂಜಿನಿಯಸ್ ಇನ್ ಸೈಡ್ಸ್-23” ಉದ್ಘಾಟಿಸಿ ಅವರು ಮಾತನಾಡಿದರು.

ವ್ಯವಹಾರಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ರಘು ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಬಿಂದು ಟಿ ಇವರು ಸ್ಪರ್ಧೆಯ ರೂಪರೇಷೆ ಮತ್ತು ನಿಯಮ ನಿಬಂಧನೆಗಳನ್ನು ತಿಳಿ ಹೇಳಿದರು. ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಕಾರ್ಯಕ್ರಮದ ಸಂಚಾಲಕಿ ಸ್ಮಿತಾ ಹಾಗೂ ಸ್ಪರ್ಧೆಯ ನಿರ್ಣಾಯಕರು ಹಾಗೂ ಮುಖ್ಯ ಅತಿಥಿಗಳಾದ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಹರಿಕೇಶವ ಎಂ.ವಿ., ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ರಾಮಕೃಷ್ಣ ಹಾಗೂ ಮಾಹೆ ಮಣಿಪಾಲದ ಉಜ್ವಲ್ ಉಪಸ್ಥಿತರಿದ್ದರು.

ಬಿ.ಕಾಂ. ಮತ್ತು ಬಿ.ಬಿ.ಎ. ತರಗತಿಗಳ 14 ತಂಡಗಳು ವಿವಿಧ ರೀತಿಯ ಮಸಾಲಾ ಪೌಡರ್, ಸೆನ್ಸರ್ ವಾಚುಗಳು, ತಂಪುಪಾನೀಯ, ಸೋಪುಗಳು, ಪ್ರಕೃತಿಗೆ ಅನುಕೂಲವಾಗುವ ಚಹಾ ಕುಡಿಯುವ ಕಪ್ ಇತ್ಯಾದಿ ಉತ್ಪನ್ನಗಳ ಮಾರುಕಟ್ಟೆಯ ಪ್ರಾತ್ಯಕ್ಷಿಕೆ ಸ್ಪರ್ಧೆ ನಡೆಸಿಕೊಟ್ಟರು. ಉಪನ್ಯಾಸಕರಾದ ವೆಂಕಟೇಶ್ ಭಟ್ ಸ್ವಾಗತಿಸಿ, ರುಡ್ವಿನ್ ವಂದಿಸಿದರು. ಅಂತಿಮ ಬಿ.ಕಾಂ. ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಉಪನ್ಯಾಸಕಿ ಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ನರೇಂದ್ರ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ: ಯಶ್ಪಾಲ್ ಸುವರ್ಣ

ಉಡುಪಿ, ನ.14: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಗೆ...

ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಲು ಸಾಧ್ಯ: ಡಾ. ರಂಜಿತ ರಾವ್

ಮಂಗಳೂರು, ನ.14: ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜನರ ಪ್ರಾಣವನ್ನು ಉಳಿಸಬಹುದು...

ಅಧ್ಯಕ್ಷರ ಆಯ್ಕೆ: ಚುನಾವಣಾ ಅಧಿಕಾರಿ ನೇಮಕ

ಉಡುಪಿ, ನ.14: ಜಿಲ್ಲೆಯ ಬೈಂದೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕೊಲ್ಲೂರು ಗ್ರಾಮ...

ಡಿ. ದೇವರಾಜ ಅರಸು ವಿದೇಶಿ ವ್ಯಾಸಾಂಗ ವೇತನ: ಅರ್ಜಿ ಆಹ್ವಾನ

ಉಡುಪಿ, ನ.14: ಹಿಂದುಳಿದ ವರ್ಗಗಳ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ...
error: Content is protected !!