Tuesday, November 26, 2024
Tuesday, November 26, 2024

ಕಾಂಗ್ರೆಸ್‌ನ ಪ್ರಣಾಳಿಕೆ ಚೆನ್ನಾಗಿತ್ತು? ಆದರೆ ಪೆನ್ನಿನಲ್ಲಿ ಸ್ವಲ್ಪ ಶಾಹಿ ಜಾಸ್ತಿ ಇತ್ತು!

ಕಾಂಗ್ರೆಸ್‌ನ ಪ್ರಣಾಳಿಕೆ ಚೆನ್ನಾಗಿತ್ತು? ಆದರೆ ಪೆನ್ನಿನಲ್ಲಿ ಸ್ವಲ್ಪ ಶಾಹಿ ಜಾಸ್ತಿ ಇತ್ತು!

Date:

ಕಾಂಗ್ರೆಸ್ ಪ್ರಣಾಳಿಕೆ ಚೆನ್ನಾಗಿತ್ತು ಯಾಕೆ ಕೇಳಿದರೆ ಬಹುಮುಖ್ಯಾಗಿ ಉದ್ಯೇೂಗಿಗಳ ಮತ್ತು ನಿರುದ್ಯೋಗಿ ಸುಶಿಕ್ಷಿತರಿಗೆ ಅನುಕೂಲಕರವಾದ ಈಡೇರಿಸಬಹುದಾದ ಕೆಲವೊಂದು ಬೇಡಿಕೆಗಳನ್ನು ಪೂರೈಸುತ್ತೇವೆ ಅನ್ನುವ ಘೇೂಷಣೆ. ನವಯುವ ಮತದಾರರನ್ನು ಆಕರ್ಷಿಸಲು ಸಹಕಾರಿ. ಸರಕಾರಿ ವಲಯದಲ್ಲಿ ಖಾಲಿ ಹುದ್ದೆಗಳ ಭರ್ತಿ. ಕನಿಷ್ಠ ವೇತನದಲ್ಲಿ ದುಡಿಯುತ್ತಿದ್ದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ವೇತನ ದುಪ್ಪಟ್ಟು ಹೆಚ್ಚಿಸುವ ನಿರ್ಧಾರ ನಿಜಕ್ಕೂ ಆಶಾ ಕಾರ್ಯಕರ್ತರ ಬದುಕಿಗೆ ಹೊಸ ಆಶಾ ಕಿರಣ. ಇದೊಂದು ಶೇೂಷಿತ ವರ್ಗದ ಕಣ್ಣೀರು ಒರೆಸುವ ನಿರ್ಧಾರವೂ ಹೌದು.

ರಾಜ್ಯದಲ್ಲಿ ಸರಕಾರಿ ಹಾಗೂ ಖಾಸಗಿ ಅನುದಾನಿತ ಸಂಸ್ಥೆಗಳ ಬಹು ಬೇಡಿಕೆಯಾದ ಜೀವನಾಂಶದ ಹಳೆ ಪಿಂಚಣಿ ಬೇಡಿಕೆಗೆ ಸ್ಪಂದಿಸಿ ತಮ್ಮ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಿರುವುದು ರಾಜ್ಯ ಸುಮಾರು 5 ಲಕ್ಷಕ್ಕೂ ಹೆಚ್ಚು ನೌಕರರ ಪಾಲಿಗೆ ಹೊಸ ಭರವಸೆಯನ್ನು ಮೂಡಿಸಿರುವುದಂತೂ ಸತ್ಯ. ಇದನ್ನೇ ನಂಬಿಕೊಂಡಿರುವ ಕುಟುಂಬದ ಸದಸ್ಯರು ಖಂಡಿತವಾಗಿಯೂ ಈ ಬಾರಿ ಹಳೆ ಪಿಂಚಣಿಗೆ ಮತ ನೀಡುವುದು ಶತ ಸಿದ್ದ. ಯಾಕೆಂದರೆ ಇದು ಅವರ ಬದುಕಿನ ಪ್ರಶ್ನೆ. ಅಂದರೆ ಸರಿ ಸುಮಾರು ಪ್ರತಿ ಕ್ಷೇತ್ರದಲ್ಲಿ ಮೂರರಿಂದ ನಾಲ್ಕು ಸಾವಿರ ಮತದಾರರು ಇವರೇ ಇರುವ ಕಾರಣ ಇವರ ಮತವನ್ನು ಕಡೆಗಣಿಸುವ ಹಾಗೆ ಇಲ್ಲ.

ಬಿಜೆಪಿ ಸರ್ಕಾರ ಈ ಕುರಿತಾಗಿ ಯಾವುದೇ ಸ್ಪಂದನೆ ನೀಡದೆ ಇರುವ ಕಾರಣ ಪದವಿಧರ ಶಿಕ್ಷಕರ ಕ್ಷೇತ್ರಗಳ ಶಾಸಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಜೆಡಿಎಸ್ ಪಕ್ಷ ಸೇರಲು ಇದೇ ಕಾರಣವಾಗಿದೆ. ತಾವು ಇದೇ ಪಕ್ಷದಲ್ಲಿ ಇದ್ದರೆ ತಮಗೆ ಉಳಿಗಾಲವಿಲ್ಲ ಅನ್ನುವ ಸತ್ಯದ ಅರಿವು ಅವರಿಗಾಗಿದೆ. ಆದರೆ ಬಿಜೆಪಿಯ ಹಿರಿಯ ನಾಯಕರಿಗೆ ಅರ್ಥವಾಗಲೇ ಇಲ್ಲ.
ಕಾಂಗ್ರೆಸ್ ಪ್ರಣಾಳಿಕೆ ಚೆನ್ನಾಗಿ ರೂಪಿಸಿದ್ದಾರೆ ಆದರೆ, ಅವರ ಪೆನ್ನಿನಲ್ಲಿ ಸ್ವಲ್ಪ ಶಾಹಿ ಜಾಸ್ತಿ ಇದ್ದ ಕಾರಣ ಧರ್ಮ ಸಂಘಟನೆಗಳ ಹೆಸರುಗಳ ಕುರಿತಾಗಿ ಪ್ರಣಾಳಿಕೆಯಲ್ಲಿ ಪ್ರಕಟಿಸುವ ಅಗತ್ಯವಿರಲಿಲ್ಲ. ಬಿಜೆಪಿಯವರು ಇದನ್ನೇ ಕಾದುಕೊಂಡಿದ್ದರು. ಅವರ ಕೈಗೊಂದು ಬ್ರಹ್ಮಾಸ್ತ್ರ ಕಾಂಗ್ರೆಸ್ ನವರು ಕೊಟ್ಟ ಹಾಗೆ ಆಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಜನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಿದೆ ಅನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಥಬೀದಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

ಮಂಗಳೂರು, ನ.26: ಡಾ. ಪಿ. ದಯಾನಂದ ಪೈ-ಪಿ.ಸತೀಶ್ ಪೈ. ಸರ್ಕಾರಿ ಪ್ರಥಮ...

ಆಳ್ವಾಸ್ ಕಾಲೇಜಿನಲ್ಲಿ ಸಿನಿಮಾ ರಸಗ್ರಹಣ ಕಾರ್ಯಾಗಾರ

ವಿದ್ಯಾಗಿರಿ, ನ.26: ಗಾಳಿ, ನೀರು, ಅಗ್ನಿಯಷ್ಟೇ ‘ದೃಶ್ಯ-ಶ್ರವ್ಯ ಮಾಧ್ಯಮ’ವೂ ಬದುಕಿನ ಅವಿಭಾಜ್ಯ...

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಅಬ್ಬನಡ್ಕ ಭಜಕೆರೆ ಗಮ್ಮತ್ತ್ದ ಕೆಸರ್ದಗೊಬ್ಬು

ಬೆಳ್ಮಣ್, ನ.26: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಹಾಲಾಡಿ: ಕಾದಂಬರಿ ಲೋಕಾರ್ಪಣೆ

ಕುಂದಾಪುರ, ನ.26: ಹಾಲಾಡಿಯ ಬೆಳಾರ್‌ಮಕ್ಕಿ ಮಂಜುನಾಥ ಕಾಮತ್‌ರವರು ಬರೆದ 'ಕಣ್ತೆರೆದ ಕನಸು'...
error: Content is protected !!