Home ಸುದ್ಧಿಗಳು ಪ್ರಾದೇಶಿಕ ಮೇ 5- ಕಸಾಪದ ಸಂಸ್ಥಾಪನಾ ದಿನಾಚರಣೆ

ಮೇ 5- ಕಸಾಪದ ಸಂಸ್ಥಾಪನಾ ದಿನಾಚರಣೆ

333
0

ಉಡುಪಿ, ಮೇ 3: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ ಮತ್ತು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಭಾಷಾ ವಿಭಾಗ ಉಡುಪಿ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆ ಮತ್ತು ಯಕ್ಷಪ್ರೇಮಿ ಶ್ರೀ ನಾರಾಯಣ ಸ್ಮರಣಾರ್ಥ ದತ್ತಿ ಪುರಸ್ಕಾರ ಕಾರ್ಯಕ್ರಮವು ಪೂರ್ಣಪ್ರಜ್ಞ ಕಾಲೇಜಿನ ಮಿನಿ ಆಡಿಟೋರಿಯಂ ನಲ್ಲಿ ಮೇ 5 ರಂದು ಸಂಜೆ 5:30 ರಿಂದ 6:30ವರೆಗೆ ನಡೆಯಲಿದೆ.

ಕಾರ್ಯಕ್ರಮವನ್ನು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ಜೆ ಉದ್ಘಾಟಿಸಲಿದ್ದು, ಸಭಾಧ್ಯಕ್ಷತೆಯನ್ನು ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ ವಹಿಸಲಿದ್ದು, ವಿಶೇಷ ಉಪನ್ಯಾಸವನ್ನು ಸಾಹಿತಿ ನಾರಾಯಣ ಮಡಿ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಭುವನ ಪ್ರಸಾದ್ ಹೆಗ್ಡೆ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಸ್ಥಾಪಕರಾದ ಉಡುಪಿ ವಿಶ್ವನಾಥ ಶೆಣೈ, ಕಲಾವಿದ, ಮೂಳೆರೋಗ ತಜ್ಞರಾದ ಡಾ. ಸುರೇಶ ಶೆಣೈ, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್. ವಿ ಭಟ್ ಉಪಸ್ಥಿತರಿರುತ್ತಾರೆ.

ಯಕ್ಷಪ್ರೇಮಿ ಶ್ರೀ ನಾರಾಯಣ ಸ್ಮರಣಾರ್ಥ ದತ್ತಿ ಪುರಸ್ಕಾರವನ್ನು ಹಿರಿಯ ಯಕ್ಷಗಾನ ಕಲಾವಿದ ಕೂಡ್ಲಿ ದೇವದಾಸ್ ರಾವ್ ಅವರಿಗೆ ನೀಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.