ಕಾಪು, ಏ. 21: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಆದೇಶದ ಮೇರೆಗೆ, ವಿನಯ ಕುಮಾರ್ ಸೊರಕೆ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಶಿಫಾರಸ್ಸಿನ ಮೇರೆಗೆ ವಿಶ್ವಾಸ್ ವಿ ಅಮೀನ್ ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಮೀನುಗಾರರ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಭೀ ಸುಣಗಾರ ರವರು ನೇಮಕಾತಿಯನ್ನು ಅನುಮೋದಿಸಿರುತ್ತಾರೆ. ಕಾಪು ರಾಜೀವ್ ಭವನದಲ್ಲಿ ಮಂಜುನಾಥ್ ಭೀ ಸುಣಗಾರ ಹಾಗೂ ವಿನಯಕುಮಾರ್ ಸೊರಕೆಯವರು ಆದೇಶ ಪತ್ರವನ್ನು ನೀಡಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಕೆಪಿಸಿಸಿ ಕಾರ್ಯದರ್ಶಿಗಳಾದ ದೇವಿಪ್ರಸಾದ್ ಶೆಟ್ಟಿ, ರಾಜ್ಯ ಮೀನುಗಾರರ ಕಾಂಗ್ರೆಸ್ ಘಟಕದ ಜಂಟಿ ಕಾರ್ಯದರ್ಶಿಗಳಾದ ಅಖಿಲೇಶ್ ಕೋಟ್ಯಾನ್, ರಮೇಶ್ ಎಸ್ ತಿಂಗಳಾಯ, ರಾಜೇಶ್ ಮೆಂಡನ್, ಯೋಗೀಶ್ ಶಿರೂರು, ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮಹಮ್ಮದ್ ಇಮ್ರಾನ್ ಉಪಸ್ಥಿತರಿದ್ದರು.