ಉಡುಪಿ, ಏ. 17: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂ ತೆ, 118 ಬೈಂದೂರು ಮತ್ತು 119 ಕುಂದಾಪುರ ವಿಧಾನಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ಭಾರತೀಯ ಕಂದಾಯ ಸೇವೆಯ ಅಧಿಕಾರಿ ಮುಕೇಶ್ ತಾರಾಚಂದ್ ತಕ್ವಾನಿ ಅವರನ್ನು, ಉಡುಪಿ ಬನ್ನಂಜೆಯಲ್ಲಿರುವ ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ.ವಿ.ಐ.ಪಿ.-ಸಿ1 ರಲ್ಲಿ ಹಾಗೂ 120 ಉಡುಪಿ, 121 ಕಾಪು, 122 ಕಾರ್ಕಳ ವಿಧಾನಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ಭಾರತೀಯ ಕಂದಾಯ ಸೇವೆಯ ಅಧಿಕಾರಿ ಅಂಕಿತ್ ಸೋಮನಿ ಅವರನ್ನು ಬನ್ನಂಜೆಯಲ್ಲಿರುವ ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ.ವಿ.ಐ.ಪಿ.-ಸಿ ರಲ್ಲಿ ಬೆಳಗ್ಗೆ 10 ರಿಂದ 11 ರವರೆಗೆ ಸಾರ್ವಜನಿಕರು / ಜನಪ್ರತಿನಿಧಿಗಳು ಭೇಟಿ ಮಾಡಿ, ಚುನಾವಣಾ ವೆಚ್ಚ ಸಂಬಂಧಿ ದೂರುಗಳಿದ್ದಲ್ಲಿ ನೀಡಬಹುದಾಗಿದೆ.
ಮುಕೇಶ್ ತಾರಾಚಂದ್ ತಕ್ವಾನಿ ಅವರನ್ನು ಮೊ.ಸಂ. 91413 58273, 0820-2003024, ಈಮೇಲ್ ವಿಳಾಸ [email protected] ಹಾಗೂ ಅಂಕಿತ್ ಸೋಮನಿ ಅವರನ್ನು ಮೊ.ಸಂ.87627 35948 , 0820-2003020, ಈಮೇಲ್ ವಿಳಾಸ [email protected] ಮೂಲಕ ಸಂರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.