ಕುಂದಾಪುರ, ಏ. 14: ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾರ್ಥಮಿಕ ಮತ್ತು ವಿ.ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಏಪ್ರಿಲ್ 13 ರಿಂದ 22 ರವರೆಗೆ ಮಕ್ಕಳ ಬೇಸಿಗೆ ಶಿಬಿರ 2023 ‘ಪ್ಯಾಟಿ ಮಕ್ಕಳ್ ಹಳ್ಳಿ ಟೂರ್’ ಆಯೋಜಿಸಲಾಯಿತು. ಮಕ್ಕಳ ಸೃಜನಾತ್ಮಕ ಕ್ರಿಯಾಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಆರಂಭಗೊಂಡ ಈ ಶಿಬಿರದ ಉದ್ಘಾಟಕರೂ, ಸಂಪನ್ಮೂಲ ವ್ಯಕ್ತಿಗಳೂ ಆಗಿರುವ ಹೆಂಗ್ಸ್ರ್ ಪಂಚೇತಿ ಸಿದ್ದು ಖ್ಯಾತಿಯ ಚೇತನ್ ನೈಲಾಡಿ ಆಗಮಿಸಿದ್ದರು.
ಹಳ್ಳಿ ಜನರ ಭಾಷೆ, ಬದುಕಿನ ಸೊಗಡನ್ನು ವಿವರಿಸುತ್ತಾ ಮಾತನಾಡಿದ ನೈಲಾಡಿಯವರು ಎಲ್ಲ ಬೇಸಿಗೆ ಶಿಬಿರಗಳಿಗಿಂತ ಈ ಶಿಬಿರವು ಅಬಿಭಿನ್ನವಾಗಿದೆ. ಗುರುವಿಗಿಂತ ದೊಡ್ಡ ತತ್ವ ಇಲ್ಲ, ಗುರುವಿಗಿಂತ ದೊಡ್ಡ ತಪವಿಲ್ಲ, ಗುರುವೇ ಶ್ರೇಷ್ಠ ಎಂದರು.
ಚಿನ್ಮಯಿ ಆಸ್ಪತ್ರೆಯ ಸ್ತ್ರೀ ತಜ್ಞೆ ಶ್ರೀದೇವಿ ಕಟ್ಟೆ ಶುಭ ಹಾರೈಸಿದರು. ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭ ಕೆ ಎನ್., ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಜಗದೀಶ ಆಚಾರ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲತಾ ಜಿ ಭಟ್, ಕ್ಯಾಂಪ್ ನ ಹಿರಿಯ ಸದಸ್ಯೆ ರೇಖಾ ಕೆ ಯು ಉಪಸಿತರಿದ್ದರು. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕಿ ಸ್ವಪ್ನ ಸತೀಶ್ ಕಾರ್ಯಕ್ರಮ ನಿರೂಪಿಸಿದರು.