ಕೋಟ, ಏ. 12: ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಸಹಕಾರಿ, ಶಾಲಾ ರಜಾ ದಿನಗಳಲ್ಲಿ ಟಿ.ವಿ.ಮೊಬೈಲ್ ಗೀಳುಗಳಿಗೆ ತೊಡಗಿಸಿಕೊಳ್ಳದೆ ಇಂತಹ ಉಪಯುಕ್ತ ಕಾರ್ಯಕ್ರಮಗಳಲ್ಲಿ ಮಕ್ಕಳು ಉಪಯೋಗಿಸಿಕೊಂಡರೆ ಬದುಕಿನ ಯಶಸ್ಸಿನ ಹೆಜ್ಜೆಯನ್ನಿಡಲು ಸಾಧ್ಯ ಎಂದು ಸಾಂಸ್ಕೃತಿಕ ಚಿಂತಕ ನಿತ್ಯಾನಂದ ಶ್ಯಾನುಬೋಗ್ ಹೇಳಿದರು. ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ.) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಜೆ.ಸಿ.ಐ ಕಲ್ಯಾಣಪುರ, ಉಸಿರು ತರಬೇತಿ ಅಧ್ಯಯನ ಕೇಂದ್ರ ಕೋಟ ಇವರ ಆಶ್ರಯದಲ್ಲಿ ದಿ.ಕೆ.ಸಿ. ಕುಂದರ್ ಸ್ಮರಣಾರ್ಥ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರ ವಿಕಸನ-2023(ಪರಿವರ್ತನೆಯ ತಂಗಾಳಿ) ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಂಸ್ಕೃತಿಕ ಚಿಂತಕರಾದ ಮುರುಳಿಧರ್ ನಾಯ್ರಿ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷರಾದ ಮನೋಜ್ ಕುಮಾರ್, ರಾಜ್ಯ ಸಂಪನ್ಮೂಲ ವ್ಯಕ್ತಿ ಕೆ.ಕೆ ಶಿವರಾಮ್, ತಂಡದ ನಾಯಕರು ಉಪಸ್ಥಿತರಿದ್ದರು. ಥೀಮ್ ಪಾರ್ಕ್ ಸಿಬ್ಬಂದಿ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ರೋಶನ್ ಗಿಳಿಯಾರು ಸ್ವಾಗತಿಸಿ, ನಕ್ಷತ್ರ ಎನ್ ವಂದಿಸಿದರು. ಶಿಬಿರಾರ್ಥಿ ನೂತನ್ ನಿರೂಪಿಸಿದರು.