ಬೆಂಗಳೂರು, ಏ. 8: ರಾಜ್ಯದಲ್ಲಿ ಒಂದೇ ದಿನ 321 ಮಂದಿ ಸೋಂಕಿತರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಅತ್ಯಧಿಕ 162 ಮಂದಿ ಸೋಂಕಿತರಾಗಿದ್ದಾರೆ. ಶಿವಮೊಗ್ಗದಲ್ಲಿ 50, ಬೆಳಗಾವಿಯಲ್ಲಿ 19 ಮಂದಿ ಸೋಂಕಿಗೆ ಒಳಗಾಗಿದ್ದಾರೆ. 174 ಮಂದಿ ರಾಜ್ಯಾದ್ಯಂತ ಗುಣಮುಖರಾಗಿದ್ದು, ಒಟ್ಟು 1,743 ಸಕ್ರಿಯ ಪ್ರಕರಣಗಳಿವೆ.
ದಕ್ಷಿಣ ಕನ್ನಡದಲ್ಲಿ ಇಂದು ಎರಡು ಪಾಸಿಟಿವ್ ಪ್ರಕರಣ ಕಂಡುಬಂದಿದ್ದು ಒಟ್ಟು 19 ಸಕ್ರಿಯ ಪ್ರಕರಣಗಳಿವೆ. ಉಡುಪಿಯಲ್ಲಿ ಇಂದು ಓರ್ವ ವ್ಯಕ್ತಿ ಸೋಂಕಿಗೆ ಒಳಗಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 9 ಸಕ್ರಿಯ ಪ್ರಕರಣಗಳಿವೆ.