ಬೆಂಗಳೂರು, ಏ. 8: ನಂದಿನಿ ಕರ್ನಾಟಕದ ಹೆಮ್ಮೆಯಾಗಿದ್ದು ರಾಷ್ಟ್ರಮಟ್ಟದಲ್ಲಿ ನಂಬರ್ 1 ಆಗಿಸಲು, ನಮ್ಮ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಸೇರಿದಂತೆ, ಮೆಗಾ ಡೈರಿಗಳ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ನಂದಿನಿಯ ಮಾರುಕಟ್ಟೆ ವ್ಯಾಪ್ತಿ ವಿಶಾಲವಾಗಿದ್ದು, ಅಮೂಲ್ ಬಗ್ಗೆ ಯಾವುದೇ ಭಯ ಬೇಡ. ಕಾಂಗ್ರೆಸ್ ಪಕ್ಷ ಎಲ್ಲದರಲ್ಲೂ ರಾಜಕೀಯ ಮಾಡುವುದು ರಾಜ್ಯದ ಪ್ರಗತಿಯ ದೃಷ್ಟಿಯಿಂದ ಸೂಕ್ತವಾದುದಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಕಾಂಗ್ರೆಸ್ ಪ್ರಶ್ನೆ: ಮುಖ್ಯಮಂತ್ರಿಯೇ ನಂದಿನಿಯನ್ನು ಬಿಟ್ಟು ಅಮೂಲ್ನ ಪ್ರಚಾರ ರಾಯಭಾರಿಯಂತೆ ವರ್ತಿಸುತ್ತಿದ್ದಾರೆ. ಕೆ.ಎಂ.ಎಫ್ ಸಂಸ್ಥೆಯ ಉನ್ನತೀಕರಣಕ್ಕೆ, ನಂದಿನಿ ಉತ್ಪನ್ನಗಳ ಬಲವರ್ಧನೆಗೆ ಬಿಜೆಪಿ ಕೈಗೊಂಡ ಕ್ರಮಗಳೇನು? ಹಾಲು ಉತ್ಪಾದಕರ ಸಹಾಯಧನವನ್ನು ಬಿಡುಗಡೆ ಮಾಡದಿರುವುದೇಕೆ? ಎಂದು ಕಾಂಗ್ರೆಸ್ ಟ್ವಿಟರ್ ನಲ್ಲಿ ಪ್ರಶ್ನಿಸಿದೆ.