Thursday, November 14, 2024
Thursday, November 14, 2024

ಅವಕಾಶಗಳನ್ನು ಅಭಿವೃದ್ಧಿಗೆ ಬಳಸಿಕೊಳ್ಳಿ: ಡಾ.ರಾಘವೇಂದ್ರ ಹೊಳ್ಳ

ಅವಕಾಶಗಳನ್ನು ಅಭಿವೃದ್ಧಿಗೆ ಬಳಸಿಕೊಳ್ಳಿ: ಡಾ.ರಾಘವೇಂದ್ರ ಹೊಳ್ಳ

Date:

ಮಂಗಳೂರು, ಮಾ. 31: ಧ್ಯೇಯ, ಧೈರ್ಯ, ವಿಶ್ವಾಸಾರ್ಹತೆ, ಪ್ರಶಂಸೆಯ ಜತೆಗೆ ಉತ್ತಮ ಸಂವಹನ ಕೌಶಲವಿದ್ದಾಗ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ, ಬದುಕು ರೂಪಿಸಿಕೊಳ್ಳಬಹುದು. ನಮ್ಮ ದೇಶದಲ್ಲಿ ಶಿಕ್ಷಣ ವಂಚಿತರು, ವಿಕಲಚೇತನರು, ಮಾನಸಿಕ ಅಸ್ವಸ್ಥರು, ಬಾಲ ಕಾರ್ಮಿಕರು ಹೀಗೆ ಸಾಕಷ್ಟು ಮಂದಿ ಅವಕಾಶ ವಂಚಿತರಿದ್ದಾರೆ. ಆದರೆ ಅವಕಾಶಗಳ ನಡುವೆ ಬದುಕುತ್ತಿರುವ ಅದೃಷ್ಟವಂತರಾದ ನಾವು ನಮ್ಮ ಸಾಮಥ್ಯವನ್ನು ಅಭಿವೃದ್ಧಿಗೆ ಬಳಸಿಕೊಳ್ಳುವ ಮೂಲಕ ವ್ಯಕ್ತಿತ್ವದ ಜತೆಗೆ ಸಾಂಸ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು ಎಂದು ಮಂಗಳೂರಿನ ಸ್ವಸ್ತಿಕ್ ನ್ಯಾಶನಲ್ ಸ್ಕೂಲ್ ಅಧ್ಯಕ್ಷ, ಸ್ವಸ್ತಿಕ್ ಕನ್ಸಲ್ಟೆನ್ಸಿ ಸರ್ವಿಸ್ ನ ಸಿ.ಒ.ಒ. ಡಾ.ರಾಘವೇಂದ್ರ ಹೊಳ್ಳ ಎನ್ ಹೇಳಿದರು.

ಅವರು ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ಆರಂಭಗೊಂಡ ಮೂರು ದಿನಗಳ ರಾಜ್ಯಮಟ್ಟದ ‘ಆಕೃತಿ’ ತಾಂತ್ರಿಕ, ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಜನಪದವು ಪರಿಸರದಲ್ಲಿ ಎರಡೂವರೆ ದಶಕಗಳ ಹಿಂದೆ ಇಂಜಿನಿಯರಿಂಗ್ ಕಾಲೇಜನ್ನು ಆರಂಭಿಸುವ ಮೂಲಕ ಈ ಭಾಗದ ಯುವಜನತೆಗೆ ತಾಂತ್ರಿಕ ಶಿಕ್ಷಣ, ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದ ಕೆನರಾ ಶಿಕ್ಷಣ ಸಂಸ್ಥೆ ಇದೀಗ ವಿಕಾಸದ ಹಾದಿಯಲ್ಲಿದ್ದು ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯವಾಗಿ ಬೆಳೆಯುವಂತಾಗಲಿ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಆಡಳಿತ ಮಂಡಳಿ ಅಧ್ಯಕ್ಷ ಡಿ. ವಾಸುದೇವ ಕಾಮತ್ ಶುಭ ಹಾರೈಸಿದರು. ಕಾಲೇಜು ಸಂಚಾಲಕ, ಆಡಳಿತ ಮಂಡಳಿ ಕಾರ್ಯದರ್ಶಿ ಎಂ. ರಂಗನಾಥ ಭಟ್, ಆಡಳಿತ ಮಂಡಳಿಯ ಜತೆ ಕಾರ್ಯದರ್ಶಿಗಳಾದ ಟಿ. ಗೋಪಾಲಕೃಷ್ಣ ಶೆಣೈ, ಕೆ.ಸುರೇಶ್ ಕಾಮತ್, ಸದಸ್ಯ ಬಸ್ತಿ ಪುರುಷೋತ್ತಮ ಶೆಣೈ, ಆಕೃತಿ ಉತ್ಸವದ ಪ್ರಧಾನ ಸಮನ್ವಯಕಾರ ನವೀನ್ ಎ.ಕುಲಾಲ್, ವಿದ್ಯಾರ್ಥಿ ಸಮನ್ವಯಕಾರರಾದ ಶ್ರೀಹರಿ ಭಟ್, ವಿಘ್ನೇಶ್ ಕಾಮತ್, ತಾರಾ ಕಾಮತ್ ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷ ಪ್ರಣೀತ್ ಶೆಟ್ಟಿ, ಉಪಾಧ್ಯಕ್ಷ ವಿಜಯರಾಜ್ ಉಪಸ್ಥಿತರಿದ್ದರು.

ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ವಾರ್ಷಿಕ ವರದಿ ವಾಚಿಸಿದರು. ಸಹ ಪ್ರಾಧ್ಯಾಪಕಿ ಕ್ಯಾರಲ್ ಡಿ.ಮೆಲ್ಲೋ ಅತಿಥಿಯನ್ನು ಪರಿಚಯಿಸಿದರು. ಪ್ರತಿಭಾನ್ವಿತರು, ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿ ಕೌನ್ಸಿಲ್ ಜತೆ ಕಾರ್ಯದರ್ಶಿ ಆಶಯ್ ಶೆಟ್ಟಿ ಸಾಧಕ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಎ.ಐ.ಎಂ.ಎಲ್ ವಿಭಾಗ ಮುಖ್ಯಸ್ಥ ಡಾ.ಬಸಪ್ಪ ಬಿ. ಕೊಡದ ಸ್ವಾಗತಿಸಿದರು. ವಿದ್ಯಾರ್ಥಿ ಕೌನ್ಸಿಲ್ ಕಾರ್ಯದರ್ಶಿ ಆದಿತ್ಯ ಪೈ ವಂದಿಸಿದರು. ವಿದ್ಯಾರ್ಥಿಗಳಾದ ವಿಘ್ನೇಶ್ ಭಕ್ತ, ಮೇಘಶ್ರೀ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭಕ್ಕೂ ಮೊದಲು ಕಾಲೇಜಿನ ಅಕಾಡೆಮಿಕ್ ಬ್ಲಾಕ್ನಲ್ಲಿ ನೂತನ ಸೆಮಿನಾರ್ ಹಾಲ್, ಡೀನ್ಸ್ ಕ್ಯಾಬಿನ್ಸ್, ಸ್ಕಿಲ್ ಲ್ಯಾಬ್ ಸಹಿತ ನವೀಕೃತ ಲ್ಯಾಬ್ ಗಳನ್ನು ಗಣ್ಯರು ಉದ್ಘಾಟಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ ಸಂಭ್ರಮ

ಉಡುಪಿ, ನ.13: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಪರ್ಯಾಯ...

ಮೀನುಗಾರರಿಗೆ ಎನ್.ಎಫ್.ಡಿ.ಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಉಡುಪಿ, ನ.13: ಅಸಂಘಟಿತ ವಲಯವಾದ ಮೀನುಗಾರಿಕೆ ವಲಯವನ್ನು ಸಂಘಟಿತ ವಲಯವಾಗಿ ರೂಪಿಸುವ...

ಆಳ್ವಾಸ್ ವಿರಾಸತ್-2024: ಮಳಿಗೆ ತೆರೆಯಲು ಆಹ್ವಾನ

ಮೂಡುಬಿದಿರೆ, ನ.13: ಇದೇ ಬರುವ ಡಿಸೆಂಬರ್ 10 ಮಂಗಳವಾರದಿಂದ 15ನೇ ಭಾನುವಾರದವರೆಗೆ...

ಜ್ಞಾನಸುಧಾ: ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಉಡುಪಿ, ನ.13: ರಾಷ್ಟ್ರದಾದ್ಯಂತ ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳನ್ನು ಗ್ರಾಮೀಣ ಬದುಕಿಗೆ ಬೆಸೆಯುವ...
error: Content is protected !!