ಆಕಾಶ ಕೊಡುವ ಖುಷಿಯೇ ಹೀಗೆ. ನಿನ್ನೆ ಸಂಜೆ ಅನೇಕರು ಫೋನಾಯಿಸಿ ಪಶ್ಚಿಮ ಆಕಾಶದಲ್ಲಿ ಅದೇನು ಚೆಂದ ಚಂದ್ರ ಅದರ ಪಕ್ಕ ಫಳಫಳ ಹೊಳೆಯುವುದೇನದು ಎಂದರು. ಬಿದಿಗೆ ಚಂದ್ರನ ಮೇಲೆ ಹೊಳೆವ ಶುಕ್ರ ಎಂದೆ.
ಇವತ್ತು ತದಿಗೆ ಚಂದ್ರ ಶುಕ್ರನಿಗೆ ಮುತ್ತು ಕೊಡುವಂತೆ ನೇರ ಬಂದು, ಶುಕ್ರ ಕೆಲ ಕಾಲ ಮರೆಯಾಗುತ್ತದೆ. ಇದಕ್ಕೆ ಆಚ್ಛಾದನೆ ಎನ್ನುವರು.
ಸಂಜೆ 4:10 ರಿಂದ 5:40 ರ ವರೆಗೆ. ಆಗ ಆಕಾಶದಲ್ಲಿ ಸೂರ್ಯನಿರುವುದರಿಂದ ನಮ್ಮ ಭಾರತೀಯರಿಗೆ ಶುಕ್ರ ಚಂದ್ರನಿಗೆ ನೇರ ಹಿಂದಿಂದ ಬಂದು ಮರೆಯಾಗುವುದನ್ನು ನೋಡುವುದು ಬಲು ಕಷ್ಟ. ಜಪಾನ್, ಸಿಂಗಾಪುರದವರು ನೋಡಬಹುದು.
ನಮಗೆ ಇಂದು ಸಂಜೆ ಸೂರ್ಯಾಸ್ತದ ನಂತರ ಚಂದ್ರ ಶುಕ್ರನಿಗಿಂತ ಸ್ವಲ್ಪ ಮೇಲೆ ಕಾಣಿಸಲಿದೆ. ಇಂದು ಚಂದ್ರ ಭೂಮಿಯಿಂದ 3 ಲಕ್ಷದ 82 ಸಾವಿರ ಕಿಮೀ ದೂರದಲ್ಲಿದ್ದರೆ ಶುಕ್ರ ಸುಮಾರು 18 ಕೋಟಿ ಕಿಮೀ ದೂರದಲ್ಲಿದೆ. ಶುಕ್ರ ಗ್ರಹ ಚಂದ್ರನಿಗಿಂತ ಸುಮಾರು 45 ಪಟ್ಟು ದೊಡ್ಡದು.
ಈಗ ಆಕಾಶ ವೀಕ್ಷಣೆಗೆ ಒಳ್ಳೆಯ ಕಾಲ ನೆತ್ತಿಯ ಮೇಲೆ ಕೃತ್ತಿಕಾ Pleiades, ರೋಹಿಣಿ Aldebaran 60ly, ಮೃಗಶಿರಾ, ಆರ್ದ್ರಾ Betelgeuse 540ly, ದಕ್ಷಿಣದಲ್ಲಿ ಅಗಸ್ತ್ಯ Canopus 310ly ,ಲುಬ್ಧಕ Sirius 8.6 ly ಉತ್ತರದಲ್ಲಿ ದ್ರೌಪದಿ ಗೆಲಾಕ್ಸಿ Andromeda 23 lakh ly, ಮಹಾವ್ಯಾಧ ನಕ್ಷತ್ರ ಪುಂಜ, ಮಹಾಶ್ವಾನ ಹೀಗೆ ಎಲ್ಲವನ್ನೂ ನೋಡಬಹುದು.
-ಡಾ. ಎ.ಪಿ. ಭಟ್ ಉಡುಪಿ
ಖಗೋಳಶಾಸ್ತ್ರಜ್ಞರು