ಗಂಗೊಳ್ಳಿ, ಮಾ. 20: ಗಂಗೊಳ್ಳಿಯ ವಿಶ್ವ ಸಾಗರ ಕ್ರಿಕೆಟರ್ಸ್ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಆಹ್ವಾನಿತ ತಂಡಗಳ 90 ಗಜ ಲೀಗ್ ಮಾದರಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ವಿಶ್ವಸಾಗರ ಪ್ರೀಮಿಯರ್ ಲೀಗ್ 2023ರ ಸಮಾರೋಪ ಸಮಾರಂಭದಲ್ಲಿ ಗಂಗೊಳ್ಳಿಯ ಯುವ ಬರಹಗಾರ ಮತ್ತು ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನರೇಂದ್ರ ಎಸ್ ಗಂಗೊಳ್ಳಿ, ಒಂದು ಸಮಾಜದ ಅಭಿವೃದ್ಧಿಯಲ್ಲಿ ಕ್ರೀಡೆಯು ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಗ್ರಾಮೀಣ ಮಟ್ಟದಲ್ಲಿ ಆಯೋಜಿಸಲ್ಪಡುವ ಇಂತಹ ಪಂದ್ಯಾಟಗಳು ಬಹಳಷ್ಟು ಯುವ ಕ್ರೀಡಾ ಪ್ರತಿಭೆಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವಸಾಗರ ತಂಡದ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು. ಸಮಾಜ ಸೇವಕ ನಿತಿನ್ ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು.
ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಗೋಪಾಲ ಪೂಜಾರಿ, ಪತ್ರಕರ್ತ ಬಿ ರಾಘವೇಂದ್ರ ಪೈ, ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮ ಸಿ ಪೂಜಾರಿ, ಉದ್ಯಮಿಗಳಾದ ವಿಜಯ ಪೂಜಾರಿ, ಹರೀಶ್ ಖಾರ್ವಿ, ಅನಿಲ್ ಸಾಲಿಯಾನ್, ಶಶಿಕಾಂತ ಪೂಜಾರಿ, ದಿಲೀಪ್ ಖಾರ್ವಿ, ಸಂದೀಪ ಎಸ್ ಎಸ್, ವಿಶ್ವಸಾಗರ ಕ್ರಿಕೆಟರ್ಸ್ ನ ರಾಮ ಪೂಜಾರಿ, ಗುರುರಾಜ ದೇವಾಡಿಗ, ಜನಕ ಪೂಜಾರಿ, ವಿಜಯೇಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಸುಂದರ್ ಜಿ ಕಾರ್ಯಕ್ರಮ ನಿರೂಪಿಸಿದರು.