ಉಡುಪಿ, ಮಾ. 11: ಜಿಲ್ಲಾ ಪಂಚಾಯತ್ ಉಡುಪಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವಾನೋಪಾಯ ಅಭಿಯಾನ -ಸಂಜೀವಿನಿ ಸಹಯೋಗದಲ್ಲಿ ಉಡುಪಿ ಬನ್ನಂಜೆ ಬಾಲಭಾವನ ಆವರಣದಲ್ಲಿ ಮಾರ್ಚ್ 12 ಭಾನುವಾರ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 6.00 ಗಂಟೆ ವರೆಗೆ ಸಂಜೀವಿನಿ ಸಂತೆ ನೆಡೆಯಲಿದೆ.
ಈ ಸಂತೆಯಲ್ಲಿ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ತಿಂಡಿ ತಿನಿಸುಗಳು, ಮೂಡೆ, ಆಯುರ್ವೇದಿಕ್ ಉತ್ಪನ್ನಗಳು, ಪಿನಾಯಿಲ್, ವಿವಿಧ ಬಗೆಯ ಸೊಪ್ಪು ತರಕಾರಿಗಳು, ಒಣ ಮೀನು, ಸಾಂಬಾರ್ ಪೌಡರ್, ಚಟ್ನಿ ಪೌಡರ್, ಬಟ್ಟೆಯ ಮ್ಯಾಟ್, ತೆಂಗಿನ ಕಾಯಿ ಇತ್ಯಾದಿ ಉತ್ಪನ್ನಗಳು ಲಭ್ಯವಿರುತ್ತದೆ. ಪ್ರತಿ ಭಾನುವಾರ ನಡೆಯುವ ಈ ಸಂತೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಜೀವಿನಿ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಹೆಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.