Monday, September 23, 2024
Monday, September 23, 2024

ಕೋಟ ವಿವೇಕ ವಿದ್ಯಾಸಂಸ್ಥೆ ಅಮೃತ ಮಹೋತ್ಸವದ ಶೀರ್ಷಿಕೆ ಗೀತೆ ಬಿಡುಗಡೆ

ಕೋಟ ವಿವೇಕ ವಿದ್ಯಾಸಂಸ್ಥೆ ಅಮೃತ ಮಹೋತ್ಸವದ ಶೀರ್ಷಿಕೆ ಗೀತೆ ಬಿಡುಗಡೆ

Date:

ಕೋಟ, ಮಾ. 11: ಕೋಟ ವಿದ್ಯಾ ಸಂಘದ ಆಡಳಿತಕ್ಕೊಳಪಟ್ಟ ವಿವೇಕ ವಿದ್ಯಾಸಂಸ್ಥೆಗಳ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಮಹೋತ್ಸವದ ಶೀರ್ಷಿಕೆ ಗೀತೆ ಬಿಡುಗಡೆ ಮತ್ತು ಸಂಸ್ಮರಣಾ ಯೋಜನೆಗಳ ಪ್ರಕಟಣಾ ಫಲಕದ ಅನಾವರಣವು ಕಾಲೇಜಿನ ಮಹತ್ಮಾಗಾಂಧಿ ಸ್ಮಾರಕ ಸಭಾಭವನದಲ್ಲಿ ಜರಗಿತು.

ಕಾರ್ಯಕ್ರಮದ ಅಭ್ಯಾಗತರಾಗಿ ಆಂಧ್ರಪ್ರದೇಶದ ಭಾರತೀಯ ತಂತ್ರಜ್ಞಾನ ಹಾಗೂ ವಿಜ್ಞಾನ ಆವಿಷ್ಕಾರ ವಿಶ್ವವಿದ್ಯಾನಿಲಯ ಸಹ ಕುಲಪತಿ ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿ ಕೆ. ನರಸಿಂಹ ನಕ್ಷತ್ರಿ ಇವರು ಆಗಮಿಸಿ ಶೀರ್ಷಿಕೆ ಗೀತೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣದ ಹಂತದಲ್ಲಿ ಶಿಸ್ತಿಗೆ ಆದ್ಯತೆಯನ್ನು ನೀಡಿದಲ್ಲಿ ಮುಂದಿನ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎನ್ನುವುದನ್ನು ವಿವೇಕ ವಿದ್ಯಾ ಸಂಸ್ಥೆ ತನ್ನನ್ನು ಸೇರಿಸಿಕೊಂಡಂತೆ ಅಸಂಖ್ಯಾತ ವಿದ್ಯಾರ್ಥಿಗಳ ಜೀವನದಲ್ಲಿ ಸಾಕ್ಷಾತ್ಕರಿಸಿ ಕೊಟ್ಟಿದೆ ಎಂದರು.

ಅತಿಥಿಯಾಗಿ ಭಾಗವಹಿಸಿದ ಕೋಟ ಸಿ.ಎ ಬ್ಯಾಂಕಿನ ಅಧ್ಯಕ್ಷ ತಿಮ್ಮ ಪೂಜಾರಿ ಅಮೃತ ಮಹೋತ್ಸವದ ಸಂಸ್ಮರಣ ಯೋಜನೆಗಳ ನಾಮಫಲಕವನ್ನು ಅನಾವರಣಗೊಳಿಸಿ ಶಿಕ್ಷಣ ಹಾಗೂ ಶಿಸ್ತಿಗೆ ಹೆಸರುವಾಸಿಯಾದ ವಿವೇಕ ವಿದ್ಯಾ ಸಂಸ್ಥೆಯ ಉದ್ದೇಶಿತ ಅಮೃತ ಮಹೋತ್ಸವದ ಯೋಜನೆಗಳೆಲ್ಲವೂ ಯಶಸ್ವಿಯಾಗಿ ಸಂಪನ್ನಗೊಳ್ಳಲ್ಲಿ ಎಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಅಧ್ಯಕ್ಷ ಸಿ.ಎ ಪಿ. ಪ್ರಭಾಕರ ಮಯ್ಯ ವಹಿಸಿ, ಮಾತನಾಡಿ ವಿದ್ಯಾಸಂಸ್ಥೆಗಳ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿ, ಈ ಉತ್ಸವವು ಕೇವಲ ವಿದ್ಯಾ ಸಂಘಗಳಿಗೆ ಮಾತ್ರ ಸಿಮೀತವಾಗಿರದೆ ಹಿಂದಿನ ವಿದ್ಯಾರ್ಥಿಗಳ, ಇಂದಿನ ವಿದ್ಯಾರ್ಥಿಗಳ, ಇಲ್ಲಿ ಸೇವೆ ಸಲ್ಲಿಸಿದವರ, ಸೇವೆ ಸಲ್ಲಿಸುತ್ತಿರುವವರ, ವಿದ್ಯಾಭಿಮಾನಿಗಳ ಮಾತ್ರವಲ್ಲದೇ ಊರಿನ ಉತ್ಸವ ಆಗಬೇಕೆಂದು ತಿಳಿಸಿದರು.

ವಿದ್ಯಾಸಂಘದ ಕಾರ್ಯದರ್ಶಿ ಎಂ ರಾಮದೇವ ಐತಾಳ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ ಸ್ವಾಗತಿಸಿದರು. ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ. ಜಗದೀಶ ಹೊಳ್ಳ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು, ಅಮೃತ ಮಹೋತ್ಸವದ ಸದಸ್ಯರು, ಹಿಂದಿನ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಅಧ್ಯಾಪಕ ನಾರಾಯಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಸರಾ ಪ್ರದರ್ಶನಕ್ಕೆ ಕಲಾಕೃತಿ ಆಹ್ವಾನ

ಬೆಂಗಳೂರು, ಸೆ.21: ನಾಡಹಬ್ಬ ಮೈಸೂರು ದಸರಾ ಮಹೋತ್ಸವ - 2024ರಲ್ಲಿ ಲಲಿತಕಲೆ...

ಮ್ಯಾಕ್ಸಿಕ್ಯಾಬ್ ನ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಕಡ್ಡಾಯ ನಿಯಮ ಸಡಿಲಿಕೆಗೆ ಮನವಿ

ಬೆಂಗಳೂರು, ಸೆ.22: ಉಡುಪಿ ಜಿಲ್ಲಾ ಟ್ಯಾಕ್ಸಿ ಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್...

ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ: ಭಾಸ್ಕರ್ ಸ್ವಾಮಿ

ಕೋಟ, ಸೆ.22: ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಪಂಚವರ್ಣದ...

ಕಸಾಪ ಉಡುಪಿ ತಾಲೂಕು ಘಟಕದಿಂದ ಪುಸ್ತಕಗಳ ಕೊಡುಗೆ

ಉಡುಪಿ, ಸೆ.22: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು...
error: Content is protected !!