ಉಡುಪಿ, ಮಾ. 8: ಕಿನ್ನಿಮುಲ್ಕಿಯ ಗಣಪತಿ ಮೈದಾನದಲ್ಲಿ ವ್ಯೋಮಾ ಡ್ಯಾನ್ಸ್ ಅಕಾಡೆಮಿ ಮಾಲಕರಾದ ಮತ್ತು ತರಬೇತುದಾರರಾದ ಅವಿನಾಶ್ ಬಂಗೇರಾ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದ ನೃತ್ಯ ಕಾರ್ಯಕ್ರಮವಾದ “ನೃತ್ಯಂ-2023” ಕಾರ್ಯಕ್ರಮ ನಡೆಯಿತು.
ಉಡುಪಿ ಜಿಲ್ಲಾ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿಯ ಅಧ್ಯಕ್ಷರಾದ ಕೆ. ಕೃಷ್ಣಮೂರ್ತಿ ಆಚಾರ್ಯ ಉದ್ಘಾಟನೆ ನೆರವೇರಿಸಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ನೃತ್ಯಕ್ಕೆ ಅದರದ್ದೇ ಆದ ಮಹತ್ವವಿದೆ ಎಂದರು. ಮುಖ್ಯ ಅತಿಥಿಗಳಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಮಾರಾಟ ಫೆಡರೇಶನ್‍ನ ಅಧ್ಯಕ್ಷರು, ಸಹಕಾರಿ ರತ್ನ ಯಶ್‍ಪಾಲ್ ಸುವರ್ಣ, ಉದ್ಯಮಿಗಳು, ಗುರ್ಮೆ ಫೌಂಡೇಶನ್ ಇದರ ಮುಖ್ಯ ಪ್ರವರ್ತಕರಾದ ಸುರೇಶ್ ಶೆಟ್ಟಿ ಗುರ್ಮೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಜೇಷ್ಟ ಡೆವಲರ್ಸ್ ಇದರ ಮಾಲಕರಾದ ಯೋಗೀಶ್ ಪೂಜಾರಿ, ಶಟರ್‍ಬಾಕ್ಸ್ ಫಿಲಂಸ್‍ನ ಖ್ಯಾತ ಯ್ಯೂಟ್ಯೂಬರ್ ಸಚಿನ್ ಶೆಟ್ಟಿ, ಕಾಮಿಡಿ ಖಿಲಾಡಿ ಖ್ಯಾತಿಯ ರಾಕೇಶ್ ಮಲ್ಪೆ, ದೇಹಧಾಡ್ಯ ಪಟು ಉಮೇಶ್ ಮಟ್ಟು, ಸಂಸ್ಥೆಯ ಗೌರವಾಧ್ಯಕ್ಷಾರಾದ ಮಿಥುನ್ ಪಿ. ಶೆಟ್ಟಿ, ಹಿತೈಷಿಗಳಾದ ಸುಜಿತ್ ಗಾಣಿಗ, ಸಚಿನ್ ಸುವರ್ಣ ಪಿತ್ರೋಡಿ, ಉಪಸ್ಥಿತರಿದ್ದರು. ನೃತ್ಯಂ-2023ರ ತೀರ್ಪುಗಾರರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಪ್ರಶಾಂತ್ ಶಿಂದೆ, ತಾರಕ್ ಕ್ಷೇವಿಯರ್ ಮತ್ತು ಪೂಜಾ ಸಚಿನ್ ಉಪಸ್ಥಿತರಿದ್ದರು.
ಫಲಿತಾಂಶ: ಪ್ರಥಮ ಸ್ಥಾನ ಗದಗದ ವೆಲ್‍ನೋನ್ ಸ್ಟ್ರೇರ್ಸ್ 50,000/- ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಮಣಿಪಾಲದ ಬ್ಲಿಟ್ಜ್ ಕ್ರೇಗ್ 25,000/-ಮತ್ತು ಟ್ರೋಫಿ, ತೃತೀಯ ಸ್ಥಾನ ಉಡುಪಿಯ ಫೈ ಫೈರ್ಸ್ ತಂಡ 15,000/- ಮತ್ತು ಟ್ರೋಫಿ. ತಂಡದ ಸದಸ್ಯರಾದ ಮಮತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಶೆಟ್ಟಿ ಹಾವಂಜೆ, ಕಾರ್ಯಕ್ರಮ ನಿರೂಪಕ ಸಾಹಿಲ್ ರೈ ಕಾರ್ಯಕ್ರಮ ನಿರ್ವಹಿಸಿದರು. ಸಿನೇಮಾಟೋಗ್ರಫರ್ ಭುವನೇಶ್ ಪ್ರಭು ಹಿರೇಬೆಟ್ಟು ಸಹಕರಿಸಿದರು.