Tuesday, November 26, 2024
Tuesday, November 26, 2024

ಸಮುದಾಯ ಶೌಚಾಲಯ ನಿರ್ಮಾಣದಲ್ಲಿ ಸಾಧನೆ

ಸಮುದಾಯ ಶೌಚಾಲಯ ನಿರ್ಮಾಣದಲ್ಲಿ ಸಾಧನೆ

Date:

ಉಡುಪಿ, ಮಾ. 2: ಯಾವುದೇ ಗ್ರಾಮ ಅಥವಾ ಜಿಲ್ಲೆಯನ್ನು ಬಯಲುಶೌಚ ಮುಕ್ತಗೊಳಿಸಲು ಕೇವಲ ಮನೆಗಳಷ್ಟೇ ಶೌಚಾಲಯ ಹೊಂದಿದ್ದರೆ ಸಾಲದು. ಬದಲಿಗೆ ಆ ಗ್ರಾಮ ಅಥವಾ ಜಿಲ್ಲೆಯಲ್ಲಿ ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿಯೂ ಸಮುದಾಯ ಶೌಚಾಲಯದ ವ್ಯವಸ್ಥೆಯಿರಬೇಕು. ಆಗ ಮಾತ್ರ ಸಮುದಾಯದಲ್ಲಿ ಸಂಪೂರ್ಣ ಸ್ವಚ್ಚತೆಯನ್ನು ಕಾಪಾಡಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ರೂಢಿಯಲ್ಲಿರುವ ಬಯಲು ಬಹಿರ್ದೆಸೆ ಪದ್ದತಿಯನ್ನು ಸಂಪೂರ್ಣವಾಗಿ ತೊಲಗಿಸಿ, ಗ್ರಾಮಗಳನ್ನು ಸ್ವಚ್ಚ ಹಾಗೂ ಸುಂದರವನ್ನಾಗಿಸುವ ಮೂಲಕ ಗ್ರಾಮೀಣ ಜನರ ಆರೋಗ್ಯವನ್ನು ಕಾಪಾಡುವ ಸ್ವಚ್ಚ ಭಾರತ್ ಮಿಷನ್ ಯೋಜನೆಯ ಉದ್ದೇಶ ಕೂಡಾ ಇದೆ ಆಗಿದೆ.

ಶೌಚಾಲಯವಿಲ್ಲದೆ ಬಯಲು ಶೌಚಾಲಯಕ್ಕೆ ಹೋಗುವುದರಿಂದ ಯಾವ ದುಷ್ಪರಿಣಾಮಗಳು ಉಂಟಾಗುತ್ತದೆ ಎನ್ನುವ ಬಗ್ಗೆ ಅರಿವು ಇದ್ದರೂ ಸಹ ಕೆಲವೊಂದು ಗ್ರಾಮೀಣ ಭಾಗದಲ್ಲಿ ಇನ್ನೂ ಕೂಡ ಬಯಲೇ ಶೌಚಾಲಯವಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡು ಬಯಲು ಬಹಿರ್ದೆಸೆಗೆ ವಿದಾಯ ಹೇಳುವ ಮೂಲಕ ಸ್ವಚ್ಛ, ಸುಂದರ ಗ್ರಾಮಗಳನ್ನು ರೂಪಿಸುವಲ್ಲಿ ಪ್ರತಿಯೊಬ್ಬರೂ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದುವರೆದು ಈ ಯೋಜನೆಯ ಲಾಭ ಪಡೆದು , ರಾಜ್ಯಾದ್ಯಂತ ಅವಶ್ಯಕತೆ ಇರುವ ಕಡೆ ಅಂದರೆ ಹೆಚ್ಚಾಗಿ ಜನ ಸೇರುವ ಕಡೆ, ಮಾರುಕಟ್ಟೆ, ಬಸ್ ಸ್ಟ್ಯಾಂಡ್, ಹಾಗೂ ದೇವಸ್ಥಾನದಂತಹ ಸ್ಥಳಗಳಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ.

ಉಡುಪಿ ಜಿಲ್ಲೆಯನ್ನು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಆಗಿರುವುದಾಗಿ ಘೋಷಣೆ ಮಾಡಲಾಗಿರುತ್ತದೆ. ಬಹುತೇಕ ಗ್ರಾಮೀಣ ಕುಟುಂಬಗಳಿಗೆ ವೈಯಕ್ತಿಕ ಗೃಹ ಶೌಚಾಲಯ ಸೌಲಭ್ಯವನ್ನು ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ನಿರ್ಮಿಸಿಕೊಡಲಾಗಿದೆ. ಗೃಹ ಶೌಚಾಲಯ ನಿರ್ಮಾಣಕ್ಕೆ ಸ್ಥಳದ ಅಭಾವಿರುವ ಕುಟುಂಬಗಳಿಗೆ ಹಾಗೂ ಹೆಚ್ಚು ಜನಸಂದಣೆ ಸೇರುವ ಸ್ಥಳಗಳು, ಸಂತೆ, ಜಾತೆ ನಡೆಯುವ ಸ್ಥಳಗಳು , ಮಾರುಕಟ್ಟೆ, ಬಸ್ ನಿಲ್ದಾಣ ಹಾಗೂ ಇತರೆ ಸ್ಥಳಗಳಲ್ಲಿ ನಿಯಮಿತವಾಗಿ ಸೇರುವ ಜನಸಂದಣಿ, ವಲಸೆ ಹಾಗೂ ಇತರೆ ಕಾರಣಗಳಿಂದ ಉಂಟಾಗುವ ಜನಸಂದಣಿ, ಹಾಗೂ ಇತರೆ ಜನನಿಬಿಡ ಪ್ರದೇಶಗಳಲ್ಲಿ ಶೌಚಾಲಯದ ಅಗತ್ಯತೆ ಇದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಸ್ವಚ್ಚ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಇಂತಹ ಪ್ರದೇಶಗಳಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಉಡುಪಿ ಜಿಲ್ಲಾ ಪಂಚಾಯತ್ ಉಡುಪಿ ಸ್ವಚ್ಚ ಭಾರತ್ ಮಿಷನ್ (ಗ್ರಾ) ಉಡುಪಿ ಜಿಲ್ಲೆಯಲ್ಲಿ ಇದುವರೆಗೂ ರೂ.123 ಲಕ್ಷ ಅನುದಾನದಲ್ಲಿ 41 ಸಮುದಾಯ ಶೌಚಾಲಯವನ್ನು ನಿರ್ಮಿಣ ಕಾರ್ಯ ಕೈಗೊಂಡಿದ್ದು,38 ಕಾಮಗಾರಿಗಳು ಮುಕ್ತಾಯಗೊಂಡು ಬಳಕೆಗೆ ಸಿದ್ದವಾಗಿದ್ದು , ಇನ್ನೂ 3 ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. ಸಮುದಾಯ ಶೌಚಾಲಯ ನಿರ್ಮಾಣ ಮಾಡಲು ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಪ್ರತೀ ಶೌಚಾಲಯಕ್ಕೆ 3 ಲಕ್ಷ ರೂ ಅನುದಾನ ನೀಡಲಾಗುತ್ತದೆ. ಸಮುದಾಯ ಶೌಚಾಲಯ ನಿರ್ಮಾಣ ಮಾಡಲು ಸೂಕ್ತ ಜಾಗ ಲಭ್ಯವಿರಬೇಕು ಹಾಗೂ ಜಾಗ ಪಂಚಾಯತ್ ನ ಹೆಸರಲ್ಲಿರತಕ್ಕದ್ದು, ಒಂದು ವೇಳೆ ಖಾಸಗಿ ಒಡೆತನದ ಜಾಗವಾಗಿದ್ದರೆ, ಖಾಸಗಿ ಒಡೆತನದವರ ಒಪ್ಪಿಗೆ ಪತ್ರ ಬೇಕಾಗುತ್ತದೆ. ಶೌಚಾಲಯದ ಸ್ವಚ್ಚತೆಯ ಜವಾಬ್ದಾರಿಯನ್ನು ನಿರ್ಮಿಸಿಕೊಂಡವರೇ ಮಾಡಿಕೊಳ್ಳುವ ದೃಡೀಕರಣ ಪತ್ರವನ್ನು ಜಿಲ್ಲಾ ಪಂಚಾಯತ್ ನಿಂದ ಪಡೆಯಲಾಗಿದೆ.

ಜಿಲ್ಲೆಯಲ್ಲಿ ಈ ಯೋಜನೆಯಡಿ ಈಗಾಗಲೇ ಪ್ರಸ್ತಾವನೆಗಳು ಸಲ್ಲಿಕೆಯಾಗಿರುವ, ಉಡುಪಿ ತಾಲೂಕು-3, ಬೈಂದೂರು-8,ಕಾಪು-5, ಕುಂದಾಪುರ -10, ಬ್ರಹ್ಮಾವರ-3,ಕಾರ್ಕಳ-8,ಹೆಬ್ರಿ ಯಲ್ಲಿ 4 ಸಮುದಾಯ ಶೌಚಾಲಯ ನಿರ್ಮಾಣ ಕೈಗೊಳ್ಳಲಾಗಿದೆ. ಇಲ್ಲಿನ ಪ್ರಮುಖ ಜನಸಂದಣಿ ಸ್ಥಳಗಳಲ್ಲಿ , ಸಮುದಾಯ ಶೌಚಾಲಯಗಳ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದ್ದು, ಅವುಗಳ ಸಮರ್ಪಕ ಬಳಕೆ ಮತ್ತು ಸೂಕ್ತ ನಿರ್ವಹಣೆಯೂ ಆಗುತ್ತಿದೆ. ಪ್ರತಿ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ 2.10 ಲಕ್ಷ ಹಾಗೂ ಉಳಿದ ಮೊತ್ತ 90,000.00 ಗಳನ್ನು ಸಂಬಂಧಪಟ್ಟ ಪಂಚಾಯತ್ ಗಳ 15 ನೇ ಹಣಕಾಸು ಯೋಜನೆಯಡಿ ಭರಿಸಲಾಗುತ್ತಿದೆ.

“ಗೃಹ ಶೌಚಾಲಯ ನಿರ್ಮಾಣ ಮತ್ತು ಬಳಕೆಯ ಜೊತೆಗೆ ಸಮುದಾಯ ಶೌಚಾಲಯಗಳ ನಿರ್ಮಾಣ ಮತ್ತು ಬಳಕೆಯಿಂದ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಗತ್ಯವಿರುವೆಡೆಗಳಲ್ಲಿ ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈ ಶೌಚಾಲಯ ನಿರ್ಮಾಣಕ್ಕೆ ಇಷ್ಟೇ ಸಂಖ್ಯೆಯ ಗುರಿಗಳು ಇಲ್ಲವಾಗಿದ್ದು, ಎಷ್ಟೇ ಪ್ರಸ್ತಾವನೆಗಳು ಸಲ್ಲಿಕೆಯಾದರೂ, ಪರಿಶೀಲಿಸಿ ಅನುದಾನ ಬಿಡುಗಡೆ ಮಾಡಲಾಗುವುದು. ಇದರಿಂದ ಹೆಚ್ಚು ಜನಸಂದಣಿ ಸೇರುವ ಈ ಜಾಗದಲ್ಲಿ ಶೌಚಾಲಯದ ಸಮಸ್ಯೆಗೆ ಸೂಕ್ತ ಪರಿಹಾರ ದೊರೆಯುವ ಜೊತೆಗೆ ಪರಿಸರದ ಸ್ವಚ್ಚತೆಯೂ ಸಾಧ್ಯವಾಗಲಿದೆ”- ಪ್ರಸನ್ನ ಹೆಚ್. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಉಡುಪಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಆಳ್ವಾಸ್ ಕಾಲೇಜಿನಲ್ಲಿ ಸಿನಿಮಾ ರಸಗ್ರಹಣ ಕಾರ್ಯಾಗಾರ

ವಿದ್ಯಾಗಿರಿ, ನ.26: ಗಾಳಿ, ನೀರು, ಅಗ್ನಿಯಷ್ಟೇ ‘ದೃಶ್ಯ-ಶ್ರವ್ಯ ಮಾಧ್ಯಮ’ವೂ ಬದುಕಿನ ಅವಿಭಾಜ್ಯ...

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಅಬ್ಬನಡ್ಕ ಭಜಕೆರೆ ಗಮ್ಮತ್ತ್ದ ಕೆಸರ್ದಗೊಬ್ಬು

ಬೆಳ್ಮಣ್, ನ.26: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಹಾಲಾಡಿ: ಕಾದಂಬರಿ ಲೋಕಾರ್ಪಣೆ

ಕುಂದಾಪುರ, ನ.26: ಹಾಲಾಡಿಯ ಬೆಳಾರ್‌ಮಕ್ಕಿ ಮಂಜುನಾಥ ಕಾಮತ್‌ರವರು ಬರೆದ 'ಕಣ್ತೆರೆದ ಕನಸು'...

ಕಲಾವಿದರನ್ನು ಗುರುತಿಸುವ ಕಾಯಕ ಶ್ಲಾಘನೀಯ: ಉದಯಕುಮಾರ್ ಶೆಟ್ಟಿ

ಕೋಟ, ನ.26: ಸಂಘಟನೆಗಳಿಂದ ಕಲಾರಾಧನೆ ಹಾಗೂ ಕಲಾವಿದರ ಗುರುತಿಸುವ ಕಾಯಕ ಅತ್ಯಂತ...
error: Content is protected !!