ಕುಂದಾಪುರ, ಮಾ. 2: ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ಬಾಳಿಕೆರೆಯಲ್ಲಿರುವ ಶ್ರೀ ಆದಿ ಮುಡೂರ ಹ್ಯಾಗುಳಿ ಮತ್ತು ಚಿಕ್ಕು ಪರಿವಾರ ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕೋಲ ಸೇವೆಯು ಮಾ.1ರಿಂದ ಆರಂಭಗೊಂಡಿದ್ದು ಮಾ.13ರ ತನಕ ಜರುಗಲಿರುವುದು.
ಮಾ.1 ಮತ್ತು 2 ರಂದು “ಬೊಬ್ಬರ್ಯ ಮತ್ತು ಉಮಲ್ತಿ ಅಣಿ ಸೇವೆ ಕೋಲ ನಡೆಯಿತು. ಮಾ. 3 ರಂದು “ಪಂಜುರ್ಲಿ ಅಣಿಸೇವೆ ಕೋಲ. ಮಾ. 4 ರಂದು ಧೂಮಾವತಿ ಅಣಿಸೇವೆ ಕೋಲ. ಮಾ. 5 ರಂದು ಚೌಂಡಿ ಅಣಿಸೇವೆ ಕೋಲ.
ಮಾ. 6 ರಿಂದ 10 ತನಕ ಬಾಳಿಕೆರೆ ಗ್ರಾಮಸ್ಥರ ಹರಕೆಯ ಕೋಲ ಸೇವೆ ಜರುಗಲಿರುವುದು.
ಮಾ. 11 ರಂದು “ಕಲ್ಲುಕುಟ್ಟಿಗ ಕಾಳಮ್ಮ ಅಣಿಸೇವೆ ಕೋಲ” ನಡೆಯಲಿರುವುದು. ಮಾ. 12 ರಂದು ದೇವರ ಕೊನೆಯ ಸೇವೆಯಾಟ ಮಹಾಂಕಾಳಿ ಅಮ್ಮನವರ ಮೂಡುಸೇವೆ “ಕೊಡನೀರು ಸೇವೆ”, “ಹುಲಿಹಂದಿ ಕೋಲ ಸೇವೆ” ನಡೆಯಲಿರುವುದು. ಹಾಗೂ ರಾತ್ರಿ ಗಂಟೆ 8:30 ರಿಂದ “ಮಹಾ ಅನ್ನಸಂತರ್ಪಣೆ” ನಡೆಯಲಿರುವುದು.
ಮಾ.13 ರಂದು ಬೆಳಿಗ್ಗೆ ನೀರಾಟ ಸೇವೆ ನಡೆಯಲಿರುವುದು ಎಂದು ದೈವಸ್ಥಾನದ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.