ಹೆಬ್ರಿ, ಫೆ. 21: ಖ್ಯಾತ ಸಾಹಿತಿ, ಯಕ್ಷಗಾನ ಅರ್ಥದಾರಿ, ಪ್ರಸಂಗಕರ್ತ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಅಂಬಾತನಯ ಮುದ್ರಾಡಿ ಇಂದು ನಿಧನರಾದರು. ವಯೋಸಹಜ ಅಸೌಖ್ಯದಿಂದ ಅವರು ಮುದ್ರಾಡಿಯ ತಮ್ಮ ಸ್ವಗೃಹದಲ್ಲಿ ವಿಧಿವಶರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಅಂಬಾತನಯ ಮುದ್ರಾಡಿ ಎಂದೇ ಖ್ಯಾತರಾಗಿದ್ದ ಕೇಶವ ಶೆಟ್ಟಿಗಾರ ಅವರ ಮೊಟ್ಟಮೊದಲ ಕೃತಿ ವಿಹಾರವಾಚಿಕೆ. 1935 ಜೂನ್ 4 ರಂದು ಜನಿಸಿದ ಮುದ್ರಾಡಿಯವರು ಕೇವಲ 8ನೇ ತರಗತಿ ವರೆಗೆ ಮಾತ್ರ ಓದಿದದೂ ಅವರ ಲೋಕಜ್ಞಾನ ಅಪಾರವಾಗಿತ್ತು. ಇವರ ಕೃತಿಗಳಿಗೆ ರಾಷ್ಟ್ರಕವಿ ಗೋವಿಂದ ಪೈ ಸೇರಿದಂತೆ ಹಲವರು ಮುನ್ನುಡಿ ಬರೆದಿದ್ದಾರೆ.