ಕೋಟ, ಫೆ. 13: ಸದೃಢ ಸಮಾಜದ ಪರಿಕಲ್ಪನೆ ಪ್ರತಿಯೊಂದು ಸಂಘಟನೆಯ ಮೂಲ ಧ್ಯೇಯವಾಗಿರಬೇಕು. ಸಂಘಟನೆಗಳ ಸಮಾಜಮುಖಿ ಚಿಂತನೆಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಯುವವಾಹಿನಿ ಯಡ್ತಾಡಿ ಘಟಕ ಮಕ್ಕಳ ವಿಕಸನಕ್ಕೆ ಸಹಕಾರಿಯಾಗುವ ಕಾರ್ಯಕ್ರಮಗಳ ಜೊತೆಗೆ ಎಲೆಮರೆಯಲ್ಲಿರುವ ಸಾಧಕರನ್ನು ಗುರುತಿಸುತ್ತಿರುವುದು ಶ್ಲಾಘನೀಯ ಎಂದು ಕೋಟ ಸಿ.ಎ ಬ್ಯಾಂಕ್‌ನ ಅಧ್ಯಕ್ಷ ತಿಮ್ಮ ಪೂಜಾರಿ ಹೇಳಿದರು. ಅವರು ಯಡ್ತಾಡಿ ಶ್ರೀ ಕೃಷ್ಣ ನಿಲಯದಲ್ಲಿ ಯುವವಾಹಿನಿ(ರಿ.) ಯಡ್ತಾಡಿ ಘಟಕದ ಪದ ಸ್ವೀಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೃಷಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸೋಮ ಪೂಜಾರಿ ಸಕ್ಕಟ್ಟು ಶಿರಿಯಾರ, ರಾಷ್ಟ್ರಮಟ್ಟದ ಜಾವೆಲಿನ್ ಥ್ರೋ ಆಟಗಾರ್ತಿ ಕರಿಷ್ಮಾ ಸನಿಲ್ ಅವರನ್ನು ಸನ್ಮಾನಿಸಲಾಯಿತು. ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾದ ಯಶಸ್ವಿನಿ ಎ ಬಾರ್ಕೂರು ಹಾಗೂ ಜಿಲ್ಲಾಮಟ್ಟದ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಅನನ್ಯ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ರಮೇಶ್ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ರಾಜೇಶ್ ಬಿ, ಶಿಕ್ಷಕ ಭಾಸ್ಕರ ನಡೂರು, ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ನಿಯೋಜಿತ ಕಾರ್ಯದರ್ಶಿ ಅಜಿತ್ ಕುಮಾರ್ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಅಣ್ಣಪ್ಪ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಸುಶಾಂತ್ ಪೂಜಾರಿ ವರದಿ ಮಂಡಿಸಿದರು. ಪ್ರತಿಮಾ ರಮೇಶ್ ಹಾಗೂ ರಮೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.