Friday, September 20, 2024
Friday, September 20, 2024

ಸೂರ್ಯ ಅದೇಕೆ ವಿಚಿತ್ರವಾಗಿ ಸಿಡಿಯುತ್ತಲೇ ಇದ್ದಾನೆ?

ಸೂರ್ಯ ಅದೇಕೆ ವಿಚಿತ್ರವಾಗಿ ಸಿಡಿಯುತ್ತಲೇ ಇದ್ದಾನೆ?

Date:

ವಿಜ್ಞಾನಿಗಳ ಊಹೆಗೂ ಮೀರಿ ಈಗ ಕೆಲ ದಿನಗಳಿಂದ ಸೂರ್ಯ ಸಿಡಿಯುತ್ತಿದ್ದಾನೆ. ಫೆಬ್ರವರಿ 7ರಿಂದ ಇದೀಗ ಎರಡು ಗಜಗಾತ್ರದ ಸೂರ್ಯಕಲೆಗಳನ್ನು ಗಮನಿಸಿ ಬೃಹತ್ ಸಿಡಿತಗಳನ್ನು ಊಹಿಸಿ ಮುಂಬರಬಹುದಾದ ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಅತ್ಯಾಶ್ಚರ್ಯ, ಮೊನ್ನೆ ಕಂಡ ಸೂರ್ಯನ ಕಲೆ AR 3213 ನಿನ್ನೆ ಫೆಬ್ರವರಿ 11 ಪುನ: ಸಿಡಿದು ಸೌರ ಜ್ವಾಲೆಯನ್ನು ಬಿತ್ತರಿಸಿದೆ. ಕೊತಕೊತ ಕುದಿವ ಪ್ಲಾಸ್ಮಾದ ಸೂರ್ಯ ಉತ್ತರ ಧ್ರುವದ ಸಮೀಪ ಸಿಡಿಯುತ್ತಲೇ ಇದ್ದಾನೆ.

ಸೂರ್ಯನ ಉತ್ತರ ಧ್ರುವದಲ್ಲಿ ಕಾಂತೀಯ ಸುಳಿ: ಫೆಬ್ರವರಿ 9ರಂದು ಕಂಡ ಬೃಹತ್ ಸೂರ್ಯನಕಲೆ ಕಾಣಿಸಿಕೊಂಡ ಬೆನ್ನಲ್ಲೇ ಸೂರ್ಯ ಉತ್ತರ ಧ್ರುವ ಸಮೀಪ ಕಾಂತೀಯ ಸುಂಟರಗಾಳಿ ನತ್ತಿಸುತ್ತಾ ಸಿಡಿಯುತ್ತಿರುವುದನ್ನು ನಾಸಾ ಗಮನಿಸಿದೆ. ಈ ಅಯಸ್ಕಾಂತೀಯ ಸುಳಿ ಇಡೀ ಧ್ರುವಕ್ಕೆ ಸುತ್ತಿದಂತೆ ಕಂಡ ವಿಜ್ಞಾನಿಗಳು ಸೂರ್ಯನ ಚಿಪ್ಪೇ ಸಿಡಿದಂತೆ ಎಂದು ವರ್ಣಿಸಿದ್ದಾರೆ. ಈ ರೀತಿಯ ಕಾಂತೀಯ ನರ್ತನ ಸೂರ್ಯನ ಗರ್ಭಗುಡಿಯಿಂದ ಹೊರನಡೆದಾಗ ವಿದ್ಯುತ್ ಕಂತೀಯ ಕಿರಣಗಳು ಚಿಮ್ಮುತ್ತವೆ. ಇದನ್ನು ಸೌರಮಾರುತಗಳು ಎನ್ನುವರು. ಭೂಮಿಯಲ್ಲಿದ್ದವರಿಗೆ ಇದು ಸೂರ್ಯಕಲೆಯಾಗಿ ಕಾಣಿಸುತ್ತದೆ. ಕಾಂತೀಯ ಸುಳಿಯಲ್ಲಿ ವಿದ್ಯುತ್ ಕಾಂತೀಯ ಕಿರಣಗಳ ಪ್ರವಾಹದಲ್ಲಿ ರೇಡಿಯೋ ಅಲೆಗಳಿಂದ ಪ್ರಾರಂಭಿಸಿ ಶಕ್ತಿಯುತ ಗಾಮಾ ಅಲೆಗಳವರೆಗೆ ಎಲ್ಲವೂ ಇರಬಹುದು.

ದಶದಿಶೆಗೆ ಚಿಮ್ಮುವ ಇವಕ್ಕೆ ಸನ್ ಫ್ಲೇರ್ ಸೂರ್ಯ ಮಾರುತ ಎನ್ನುವರು. ಇವುಗಳಲ್ಲಿ ಶಕ್ತಿಯುತ ಅತಿನೇರಳೆ ಹಾಗೂ ಎಕ್ಸ್ ಕಿರಣಗಳನ್ನು ಎಮ್ ಹಾಗೂ ಎಕ್ಸ್ ಸನ್ ಫ್ಲೇರ್ ಎನ್ನುವರು. ಎಮ್ ಸೂರ್ಯ ಮಾರುತಗಳಿಂದ ಭೂಮಿಯಲ್ಲಿ ಕೆಲ ಅವ್ಯವಸ್ಥೆಗಳು ನಡೆದರೆ ಎಕ್ಸ್ ಮಾರುತಗಳು ಗಂಡಾಂತರಕಾರಿ. ಈ ಕೆಲ ದಿನಗಳ ವಿದ್ಯಾಮಾನದಲ್ಲಿ ಎಮ್ ಕಿರಣಗಳುಚೆಲ್ಲಿವೆ. ಹಾಗೆ ಎಕ್ಸ್ ಕಿರಣಗಳೂ ಬರಬಹುದೆಂದು ಅಂದಾಜಿಸಿದ್ದಾರೆ. ಇವುಗಳಿಂದ ಭೂಮಿಯ ಕೆಲ ಭಾಗಗಳಲ್ಲಿ ವಿದ್ಯುತ್ ನಲ್ಲಿ ವ್ಯತ್ಯಯ, ಗ್ಲೋಬಲ್ ಇಂಟರ್ನೆಟ್ ಗಳ ಮೇಲೆ, ರೇಡಿಯೊ ಅಲೆಗಳು ಸೆಲ್ಫೋನ್, ಮೊಬೈಲ್ ಸಿಗ್ನಲ್ ಗಳ ಮೇಲೂ ಈ ಕೆಲ ದಿನ ಪರಿಣಾಮ ಬೀರಬಹುದೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಕಾಂತೀಯ ಕಿರಣಗಳ ಪ್ರವಾಹದ ಹಿಂದಿಂದ ಮೆರವಣಿಗೆಯೋಪಾದಿಯಲ್ಲಿ ಶಕ್ತಿಯುತಕಣಗಳ ಸಿಡಿತ ಸಂಭವಿಸುತ್ತದೆ. ಇದನ್ನು ಕೊರೋನಲ್ ಮಾಸ್ ಇಜೆಕ್ಸನ್ ಎನ್ನುವರು. ಭೂಮಿಯ ಧ್ರುವ ಪ್ರದೇಶಗಳಲ್ಲಿ ಅತಿಯಾದ ಬಣ್ಣಬಣ್ಣದ ಧ್ರುವ ಪ್ರಭೆ ಯತೇಚ್ಛವಾಗಿ ಕಾಣಿಸಬಹುದು.

ಸೂರ್ಯನ ಕಲೆಗಳ ಆವರ್ತ: ಸುಮಾರು 11 ವರ್ಷಕ್ಕೊಮ್ಮೆ ಸೂರ್ಯ ಕಲೆಗಳ ಆವರ್ತನ ನಡೆಯುತ್ತಿದೆ. ಈಗ 25ನೇ ಆವರ್ತನ ಡಿಸೆಂಬರ್ 2019 ರಿಂದ ಪ್ರಾರಂಭ. ಪ್ರತೀ 11 ವರ್ಷಗಳಲ್ಲಿ ಕೆಲ ವರ್ಷ ಅತೀ ಕಡಿಮೆ ಕಲೆಗಳು, ಕೆಲ ವರ್ಷ ಅತೀ ಹೆಚ್ಚು ಕಲೆಗಳನ್ನು ಗಮನಿಸುತ್ತಲೇ ಇದ್ದಾರೆ. ಈ ಸಾರಿಯ 25ನೇ ಆವರ್ತದಲ್ಲಿ 2023 ರಿಂದ 2026ರ ವರೆಗೆ ಹೆಚ್ಚಿಗೆ ಸೌರಕಲೆಗಳನ್ನು ಕಾಣಬಹುದೆಂದು ಅಂದಾಜಿಸಿದ್ದರು. ಹಾಗೆಯೇ ಈಗ ನಡೆಯುತ್ತಿರುವ 25ನೇ ಸೈಕಲ್ ಹೆಚ್ಚೇನೂ ವಿಶೇಷವಿರುವುದಿಲ್ಲವೆಂದು ವಿಜ್ಞಾನಿಗಳು ಅಂದಾಜಿಸಿದ್ದರು. ಆದರೆ ಸೂರ್ಯ ಈಗ ಅದೆಲ್ಲವನ್ನೂ ತಲೆಕೆಳಗೆ ಮಾಡಿಸಿ ಈ 25 ನೇ ಸೈಕಲ್ ತುಂಬಾ ವಿಚಿತ್ರವೆಂಬಂತೆ ಸೂರ್ಯ ವಿಜ್ನಾನಿಗಳನ್ನು ದಿಗ್ಭ್ರಮೆಗೊಳಿಸುತ್ತಾ ಸಿಡಿಯುತ್ತಿದ್ದಾನೆ.

ಸೂರ್ಯನ ಕಾಂತೀಯ ವ್ಯವಸ್ಥೆ: ನಮ್ಮ ಸೂರ್ಯ ನಮಗಿನ್ನೂ ಅರ್ಥವಾಗಿಲ್ಲ. ನಮ್ಮ ಸೂರ್ಯನ ಕಾಂತೀಯ ಧ್ರುವಗಳು ಭೂಮಿಯಂತೆ ಯಾವಾಗಲೂ ಒಂದೇಕಡೆ ಸ್ಥಿರವಲ್ಲ. 11 ವರ್ಷಕ್ಕೊಮ್ಮೆ ಕಾಂತೀಯ ಧ್ರುವಗಳು ಉತ್ತರದಿಂದ ದಕ್ಷಿಣಕ್ಕೆ ಪರಿವರ್ತನೆ ಗೊಳಗಾಗುತ್ತವೆ. ಇದಕ್ಕೆ ಸೂರ್ಯನ ಸಂಕೀರ್ಣ ಅಯಸ್ಕಾಂತೀಯ ವ್ಯವಸ್ಥೆಯೇ ಕಾರಣ. ಈಗ ನಡೆಯುತ್ತಿರುವ ಮಾಮೂಲಿನಂತಿರದ ವಿಚಿತ್ರ ಅಯಸ್ಕಾಂತೀಯ ರುದ್ರ ನರ್ತನಕ್ಕೆ ಕಾರಣ ತಿಳಿಯಬೇಕಿದೆಯಷ್ಟೇ. ಇದೊಂದು ಸೂರ್ಯನ ವಿಚಿತ್ರ ವಿಸ್ಮಯ.

-ಡಾ. ಎ. ಪಿ. ಭಟ್, ಉಡುಪಿ
ಖಗೋಳಶಾಸ್ತ್ರಜ್ಞರು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!