ಕಾರ್ಕಳ, ಫೆ. 8: ಜನವರಿ ತಿಂಗಳಿನಲ್ಲಿ ನಡೆದ ರಾಷ್ಟ್ರಮಟ್ಟದ ಜೆಇಇ ಪ್ರಥಮ ಹಂತದ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ 17 ವಿದ್ಯಾರ್ಥಿಗಳು 95 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆಗೈದಿದ್ದಾರೆ. ಶ್ರೇಯಸ್ ಎಸ್ ಚಿಕಾಲೆ 97.6936, ಜಾರ್ಜ್ ಜೋಸೆಫ್ 97.6545, ಸಾತ್ವಿಕ್ ಎಸ್ ಶೆಟ್ಟಿ 97.3316 ಪರ್ಸಂಟೈಲ್ ಅಂಕ ಗಳಿಸಿದ್ದಾರೆ. 43 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸಂಟೈಲ್, 66 ವಿದ್ಯಾರ್ಥಿಗಳು 85 ಕ್ಕಿಂತ ಹೆಚ್ಚು ಪರ್ಸಂಟೈಲ್ ಅಂಕ ಗಳಿಸಿದ್ದಾರೆ.
ಉದ್ಭವ್ ಎಂ ಆರ್ 96.6957, ಕಾರ್ತಿಕ್ ಕೃಷ್ಣಮೂರ್ತಿ ಹೆಗಡೆ 96.4800, ಜೀವನ್ ಎ 96.3327, ಟಿ ತರುಣ್ ಪ್ರಭು 96.3016, ಪ್ರಣವ್ ಪಿ ಸಂಜೀ 96.2750, ಆದಿತ್ಯ ವಿ ಹೊಳ್ಳ 96.2063, ಜಾಗ್ರತಿ ಕೆ ಪಿ 96.0574, ಶ್ರೇಯಸ್ ಸಂತೋಷ್ ಶೆಟ್ಟಿ 95.8559, ಆದಿತ್ಯ ಮಹೇಶ್ ಶೇಟ್ 95.9630, ಶೃಜನಿ ಎಸ್ 95.6591, ಸಾಕ್ಷಿತ್ ಶೆಟ್ಟಿ 95.6381, ರಾಮ್ ಕುಮಾರ್ ಬಾಬು ಬರ್ಗಿ 95.4680, ಅಭಯ್ ಕೆ ಆರ್ 95.4600, ಅಭಯ್ ಎಸ್ ಎಸ್ 95.2210, ಪರ್ಸಂಟೈಲ್ ಗಳಿಸಿದ್ದಾರೆ.
ಕಳೆದ ವರ್ಷ ನಡೆದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿಯೂ ಉತ್ತಮ ಸಾಧನೆಗೈದ ಕ್ರಿಯೇಟಿವ್ ವಿದ್ಯಾರ್ಥಿಗಳಲ್ಲಿ ಅನ್ವಿನ್ ಬಿ ಪಿ ಪ್ರತಿಷ್ಠಿತ ಐಐಟಿ ಬಾಂಬೆಗೆ ಆಯ್ಕೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಪ್ರಾಂಶುಪಾಲರು, ಆಡಳಿತ ಮಂಡಳಿ, ಜೆಇಇ ಸಂಯೋಜಕರಾದ ನಂದೀಶ್ ಹೆಚ್ ಬಿ., ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.