ಇಸ್ತಾಂಬುಲ್, ಫೆ. 7: ಪ್ರಬಲ ಭೂಕಂಪಕ್ಕೆ ಟರ್ಕಿ ತತ್ತರಿಸಿದೆ. ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಒಂದೇ ದಿನ ಮೂರು ಬಾರಿ ಪ್ರಬಲ ಭೂಕಂಪ ಸಂಭವಿಸಿದ್ದು, 7.8 ತೀವ್ರತೆಯ ಭೂಮಿ ಕಂಪಿಸಿದೆ. ಮಂಗಳವಾರ ಮತ್ತೊಮ್ಮೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.6 ದಾಖಲಾಗಿದೆ. 4,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವಾರು ಮಂದಿ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ಭೂಕಂಪಕ್ಕೆ ಹಲವು ಕಟ್ಟಡಗಳು ನೆಲಸಮವಾಗಿವೆ.
ಭಾರತದಿಂದ ನೆರವು: ವಾಯುಪಡೆಯ ವಿಮಾನಗಳು, ತಜ್ಞ ಎನ್.ಡಿ.ಆರ್.ಅಫ್ ಸಿಬ್ಬಂದಿಗಳೊಂದಿಗೆ ವೈದ್ಯಕೀಯ ಉಪಕರಣಗಳ ಜತೆಗೆ ಟರ್ಕಿಗೆ ತೆರಳಿವೆ.