ಉಡುಪಿ, ಜನವರಿ 27: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದಾಗಿ ಜನವರಿ 31 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
110/11 ಕೆ.ವಿ ಹಾಲಾಡಿ ವಿದ್ಯುತ್ ಉಪಕೇಂದ್ರದಲ್ಲಿ 110/11 ಕೆವಿ 10 ಎಮ್.ವಿ.ಎ ಪರಿವರ್ತಕ-1 ಹಾಗೂ ಪರಿವರ್ತಕ-2 ಗೆ ಬಣ್ಣ ಬಳಿಯುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸದರಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಶಂಕರನಾರಾಯಣ, ಆವರ್ಸೆ, ಬಿದ್ಕಲ್‌ಕಟ್ಟೆ, ಬೈಲೂರು, ಬೆಳ್ವೆ, ಹೈಕಾಡಿ, ವಾರಾಹಿ ಮತ್ತು ಕೆ.ಎನ್.ಎನ್.ಎಲ್ ಹಾಲಾಡಿ ಮಾರ್ಗಗಳಲ್ಲಿ ಅಮಾಸೆಬೈಲು, ಕುಳುಂಜೆ, ಶಂಕರನಾರಾಯಣ, ಹಾಲಾಡಿ-26, ಮಚ್ಚಟ್ಟು, ರಟ್ಟಾಡಿ, ತೊಂಬಟ್ಟು, ಕೆಳಸುಂಕ, ಜಡ್ಡಿನಗದ್ದೆ, ಹಾಲಾಡಿ, ಬಿದ್ಕಲ್ಕಟ್ಟೆ, ಗಾವಳಿ, ಹಾಲಾಡಿ-28, ಮಡಾಮಕ್ಕಿ, ಹಾಲಾಡಿ-76, ಸಿದ್ದಾಪುರ, ಉಳ್ಳೂರು-74, ಕಕ್ಕುಂಜೆ, ಹೆಸ್ಕತ್ತೂರು, ಯಡಾಡಿ-ಮತ್ಯಾಡಿ, ಹಳ್ಳಾಡಿ-ಹರ್ಕಾಡಿ, ಹಾರ್ದಳ್ಳಿ-ಮಂಡಳ್ಳಿ, ಮೊಳಹಳ್ಳಿ, ಬೈಲೂರು, ಕೊಂಡಳ್ಳಿ, ಬೆದ್ರಾಡಿ, ಕೋಣಿಹರ, ಬೆಳ್ವೆ, ಅಲ್ಬಾಡಿ, ಆರ್ಡಿ, ಹೆಂಗವಳ್ಳಿ, ಸೂರ್ಗೋಳಿ, ಶೇಡಿಮನೆ, ಹೈಕಾಡಿ ಮತ್ತು ಗೋಳಿಯಂಗಡಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ.
110/11ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಫೀಡರ್‌ಗಳಾದ ಮುಂಡ್ಕೂರು, ನಂದಳಿಕೆ ಮತ್ತು ಬೆಳ್ಮಣ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸದರಿ ಫೀಡರ್‌ಗಳಲ್ಲಿ ಬೆಳ್ಮಣ್, ಬೆಳ್ಮಣ್ ದೇವಸ್ಥಾನ, ಗೋಳಿಕಟ್ಟೆ, ನಂದಳಿಕೆ, ಜಂತ್ರ, ನೀಚಾಲು, ಕೆದಿಂಜೆ, ಮಾವಿನಕಟ್ಟೆ, ದೇಂದೊಟ್ಟು ಪದವು, ಇಟ್ಟಮೇರಿ, ಕೊರಜೆ, ಮುಂಡ್ಕೂರು, ಕಾಂಜರಕಟ್ಟೆ, ಸಚ್ಚರಿಪೇಟೆ, ಮುಲ್ಲಡ್ಕ, ಕೋಡಿಮಾರು, ಸಂಕಲಕರಿಯ, ನಾನಿಲ್ ತಾರ್, ಜಾರಿಗೆಕಟ್ಟೆ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ 110/33/11ಕೆವಿ ಹಿರಿಯಡ್ಕ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಪೆರ್ಡೂರು ಫೀಡರ್ ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಪುತ್ತಿಗೆ, ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
110/11ಕೆವಿ ಮಧುವನ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಬಾರ್ಕೂರು ಎಕ್ಸ್ ಪ್ರೆಸ್ ಫೀಡರ್ ಮಾರ್ಗದಲ್ಲಿ ರಸ್ತೆ ಅಗಲೀಕರಣ ಪ್ರಯುಕ್ತ ಹೆಚ್.ಟಿ/ಎಲ್.ಟಿ ವಿದ್ಯುತ್ ಮಾರ್ಗ ಸ್ಥಳಾಂತರ ಕಾಮಗಾರಿ ಹಾಗೂ 110/11ಕೆವಿ ನಿಟ್ಟೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಶಾಂತಿವನ ಫೀಡರಿನಲ್ಲಿ ರೀ ಕಂಡಕ್ಟರಿಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಗೋಪಾಲಪುರ, ಶಾಂತಿವನ, ಗರಡಿಮಜಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
220/110/11ಕೆವಿ ಹೆಗ್ಗುಂಜೆ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ 1*10 ಎಂ.ವಿ.ಎ, 110/11ಕೆವಿ ಪರಿವರ್ತಕದ ದುರಸ್ತಿ ಕಾರ್ಯವನ್ನು ನಿರ್ವಹಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ 220ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಹೆಗ್ಗುಂಜೆ ಉಪಕೇಂದ್ರದಿಂದ ಹೊರಡುವ 11ಕೆವಿ ಹೆಗ್ಗುಂಜೆ ಮತ್ತು ನಂಚಾರು ಫೀಡರಿನಲ್ಲಿ ಹೆಗ್ಗುಂಜೆ, ಕಾಡೂರು, ಪೆಜಮಂಗೂರು, ಕೊಕ್ಕರ್ಣೆ, ಕೆಂಜೂರು, ಶಿರೂರು, ಹಿಲಿಯಾಣ, ನಂಚಾರು, ಮುದ್ದೂರು, ಕಜ್ಕೆ, ಮಂದಾರ್ತಿ, ತಂತ್ರಾಡಿ, ನಡೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಂಬಂಧಪಟ್ಟ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.