ಕಾರ್ಕಳ, ಜ. 26: ದೇಶದ ನಾಗರಿಕನಾಗಿ ಸ್ವಯಂ ಪ್ರೇರಣೆಯಿಂದ ಜವಾಬ್ದಾರಿಗಳನ್ನು ವಹಿಸಿಕೊಂಡು ದೇಶದ ಏಳಿಗೆಗೆ ಕೈ ಜೋಡಿಸಬೇಕು ಎಂದು ಕೊಚ್ಚಿಯ ಐ.ಎನ್.ಎಸ್. ಶಾರದಾದ ಕಮಾಂಡರ್ ಅಶ್ವಿನ್.ಎಂ.ರಾವ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ 74ನೇ ಗಣರಾಜ್ಯೋತ್ಸವದಲ್ಲಿ ಧ್ವಜರೋಹಣಗೈದು ಮಾತನಾಡಿದರು. ದೇಶ ಅಂದರೆ ನಾವು, ನಾವು ಅಂದರೆ ದೇಶ ಎಂಬ ಭಾವ ಮೊಳಗಬೇಕು. ನಾನು ಭಾರತೀಯ ಎಂಬ ಹೆಮ್ಮೆ, ಗರ್ವ, ಅಭಿಮಾನ ಇರಬೇಕು ಎಂದರು.
ಶಿಸ್ತುಬದ್ಧ ವಿದ್ಯಾರ್ಥಿ ಜೀವನವು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ಜವಾಬ್ದಾರಿಯುತ ಮನಸ್ಥಿತಿಯು ಎಂತಹ ಪ್ರತಿಕೂಲ ಸ್ಥಿತಿಯನ್ನು ಸ್ವೀಕರಿಸಿಕೊಂಡು ಮುನ್ನುಗ್ಗಲು ಸಾಧ್ಯವಿದೆ ಎಂದು ನಿವೃತ್ತ ಶಿಕ್ಷಕ ಪಾಂಡುರಂಗ ರಾವ್ ಹೇಳಿದರು. ಅಜೆಕಾರ್ ಪದ್ಮಗೋಪಾಲ್ ಎಜ್ಯಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ಟ್ರಸ್ಟಿ ವಿದ್ಯಾವತಿ ಎಸ್ ಶೆಟ್ಟಿ, ಉಭಯ ಸಂಸ್ಥೆಗಳ ಪ್ರಾಂಶುಪಾಲರು, ಉಪಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.