Friday, November 1, 2024
Friday, November 1, 2024

ಭವಿಷ್ಯದ ಭದ್ರ ಬುನಾದಿ ನೀಡುವುದೇ ವಿದ್ಯಾರ್ಥಿ ಜೀವನ -ರವೀಂದ್ರ ಕೋಟ

ಭವಿಷ್ಯದ ಭದ್ರ ಬುನಾದಿ ನೀಡುವುದೇ ವಿದ್ಯಾರ್ಥಿ ಜೀವನ -ರವೀಂದ್ರ ಕೋಟ

Date:

ಕೋಟ: ವಿದ್ಯಾರ್ಥಿ ಜೀವನವೇ ವಿದ್ಯಾರ್ಥಿಯ ಭವಿಷ್ಯದ ಭದ್ರ ಬುನಾದಿಗೆ ನಾಂದಿ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು. ಸೋಮವಾರ ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಇಕೋ ಕ್ಲಬ್ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಅಸೆಂಬ್ಲಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅನುಸರಿಸಬೇಕಾದ ನೈಜ ಬದುಕಿನ ಕಾಯಕ, ಸಾಧನೆಯ ಮಜಲುಗಳ ದಾರಿ, ಪರೀಕ್ಷೆ ಎದುರಿಸಲು ಬೇಕಾದ ದೃಢತೆ ಈ ಕುರಿತಂತೆ ಮಾಹಿತಿ ನೀಡಿದರಲ್ಲದೆ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ಸಮಾಜ, ಹಸಿರು ವಾತಾವರಣ ಸೃಷ್ಠಿಸುವ ಬಗ್ಗೆ ಸಮರ್ಪಕ ಮಾಹಿತಿ ನೀಡಿ ಅತಿ ಹೆಚ್ಚು ಮೊಬೈಲ್ ಬಳಕೆಯಿಂದದಾಗುವ ಸಮಸ್ಯೆಗಳು, ಮಾದಕ ವ್ಯಸನದಿಂದ ದೂರವಿರಲು ಮಾರ್ಗೋಪಾಯ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ವತಿಯಿಂದ ರವೀಂದ್ರ ಕೋಟ ಇವರನ್ನು ಗೌರವಿಸಲಾಯಿತು. ಧರ್ಮಸ್ಥಳ ಶಾಂತಿವನ ಟ್ರಸ್ಟ್ ಹಮ್ಮಿಕೊಂಡ ಜಿಲ್ಲಾಮಟ್ಟದ ಕಂಠ ಶ್ಲೋಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಿಧೀಶ್ ಭಟ್ ಇವರನ್ನು ಗೌರವಿಸಲಾಯಿತು. ಪಂಚವರ್ಣ ಪರಿಸರಸ್ನೇಹಿ ಅಭಿಯಾನದಲ್ಲಿ ಭಾಗವಹಿಸಿದ ವಿವೇಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಈ ವೇಳೆ ಅಭಿನಂದಿಸಲಾಯಿತು.

ವಿವೇಕ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ವೆಂಕಟೇಶ ಉಡುಪ, ಶಿಕ್ಷಕರಾದ ಶಂಭು ಭಟ್, ಬಾಲಕೃಷ್ಣ ನಕ್ಷತ್ರಿ, ದೈಹಿಕ ಶಿಕ್ಷಕ ಗಣೇಶ್ ಶೆಟ್ಟಿ, ರತಿ ಬಾಯ್, ನಾಗರತ್ನ, ನಳೀನಾಕ್ಷಿ, ಶ್ಯಾಮಲ ಮಯ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿ ಮುಖಂಡ ಕೇಶವ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗಡಿಯಲ್ಲಿ ಒಂದಿಂಚು ಭೂಮಿಗೂ ರಾಜಿಯ ಪ್ರಶ್ನೆಯೇ ಇಲ್ಲ: ಪ್ರಧಾನಿ ನರೇಂದ್ರ ಮೋದಿ

ಕಚ್, ಅ.31: ಇಂದು ದೇಶವು ಗಡಿಯಲ್ಲಿ ಒಂದು ಇಂಚು ಭೂಮಿಗೂ ರಾಜಿ...

ಉಡುಪಿ ಜಿಲ್ಲಾಮಟ್ಟದ ಕ್ರೀಡಾಕೂಟ ಸಂಪನ್ನ

ಉಡುಪಿ, ಅ.31: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಹಾಗೂ ಉಡುಪಿ...

ಪುನೀತ್ ರಾಜಕುಮಾರ್‌ರಂತೆ ವ್ಯಕ್ತಿತ್ವ ರೂಪಿಸಿಕೊಳ್ಳಿ: ಸೀತಾರಾಮ ಆಚಾರ್

ಕೋಟ, ಅ.31: ಬದುಕಿನ ಆಯಾಮದಲ್ಲಿ ಪುನೀತ್ ರಾಜಕುಮಾರ್ ರಂತೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು...

ಆನಂದ ಸಿ ಕುಂದರ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಕೋಟ, ಅ.31: ಸ.ಹಿ.ಪ್ರಾ ಶಾಲೆ ಮಣೂರು ಪಡುಕರೆ ಇಲ್ಲಿ ಶಾಲಾ ಸಮುದಾಯದತ್ತ...
error: Content is protected !!