ಉಡುಪಿ: 1982ರಲ್ಲಿ ಉಡುಪಿ ಮಹಾತ್ಮ ಗಾಂಧಿ ಮೆಮೇೂರಿಯಲ್ ಕಾಲೇಜಿನ ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ತಮ್ಮ 40 ವರ್ಷಗಳ ಹಿಂದಿನ ನೆನಪುಗಳನ್ನು ಹಂಚಿಕೊಂಡರು. ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಲ್.ಸಾಮಗ ಅಂದಿನ ಕಾಲದಲ್ಲಿ ಗುರು ಶಿಷ್ಯರ ನಡುವಿನ ಸಂಬಂಧ ನೆನಪಿಸಿಕೊಂಡರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಚಿತ್ರಪಾಡಿ ಲಕ್ಷ್ಮೀನಾರಾಯಣ ಕಾರಂತರು ಮಾತನಾಡಿ, ಮುಂದಿನ ವರ್ಷದಿಂದ ಕಾಲೇಜಿಗೆ ಅಮೃತೇೂತ್ಸವ ಆಚರಣೆಯ ಶುಭ ಸಂದರ್ಭದಲ್ಲಿ ತಮ್ಮೆಲ್ಲರ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದರು.
ಎಂ.ಜಿ.ಎಂ.ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಮಾತನಾಡಿ, ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯತ್ವ ಸ್ವೀಕರಿಸಬೇಕೆಂದರು. ಪ್ರಾಕ್ತನ ವಿದ್ಯಾರ್ಥಿ ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಗಣಪತಿ ಭಟ್ ಕೆ. ಬೆಳ್ತಂಗಡಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸುಮಾರು 30 ಮಂದಿ ಹಳೆ ವಿದ್ಯಾರ್ಥಿಗಳು ಸಂಘದ ಸದಸ್ಯರಾಗಿ ಹೆಸರು ನೊಂದಾಯಿಸಿಕೊಂಡರು. ಹಳೆ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮದ ಮುಂದಾಳತ್ವವನ್ನು ವಹಿಸಿದ್ದ ಹಳೆ ವಿದ್ಯಾರ್ಥಿ ರಾಮದಾಸ್ ಪೈ ಸ್ವಾಗತಿಸಿದರು. ಮುಂಬಯಿ ಬೆಂಗಳೂರು ಕೊಡಗು ಹಾಗೂ ವಿವಿಧ ಕಡೆಯಿಂದ ಹಳೆ ವಿದ್ಯಾರ್ಥಿಗಳು ಆಗಮಿಸಿದ್ದರು. ಹಳೆ ವಿದ್ಯಾರ್ಥಿ ಶೈಲಜಾ ವಾಣಿ ಭಟ್ಟ ಪ್ರಾರ್ಥನೆಗೈದರು.