ಉಡುಪಿ: ವಿಶ್ವ ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ ಮಠಾಧೀಶರಾದ ಪುತ್ತಿಗೆ ಶ್ರೀಪಾದರನ್ನು ಆಸ್ಟ್ರೇಲಿಯಾ ಅನಿವಾಸಿ ವಲಸೆ ಸಚಿವರಾದ ಆಂಡ್ರೂ ಗೈಲ್ಸ್ ತಮ್ಮ ನಿವಾಸಕ್ಕೆ ಕರೆಯಿಸಿ ಆಶೀರ್ವಾದ ಪಡೆಕೊಂಡರು.
ಇತ್ತೀಚಿಗೆ ಹಿಂದೂ ದೇವಾಲಯಗಳನ್ನು ಗುರಿಯಾಗಿರಿಸಿ ಆಕ್ರಮಣ ಮಾಡಿ ಹಾನಿ ಮಾಡಿರುವ ಬಗ್ಗೆ ಶೀಘ್ರ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಪುತ್ತಿಗೆ ಶ್ರೀಗಳು ಆಗ್ರಹಿಸಿದರು. ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆಯಿತ್ತು, ಶ್ರೀಗಳ ಸಲಹೆಯನ್ನು ಪಡೆದುಕೊಂಡರು.
ಭಾರತೀಯರಿಗೆ ವೀಸಾ ಕಾರ್ಯಗಳ ಶೀಘ್ರ ವಿಲೇವಾರಿ ಬಗ್ಗೆಯೂ ಪ್ರಸ್ತಾವಿಸಲಾಯಿತು.
ಸಚಿವರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆಯಿತ್ತರು. ಶ್ರೀಪಾದರು ಮುಂಬರುವ ತಮ್ಮ ಪರ್ಯಾಯಕ್ಕೆ ಆಹ್ವಾನಿಸಿದರು. ಸಚಿವರು ಶ್ರೀಪಾದರ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀಪಾದರು ವಿಶ್ವಭ್ರಾತೃತ್ವವನ್ನು ಸಾರುವ ಸ್ಮರಣಿಕೆಯನ್ನು ಸಚಿವರಿಗೆ ನೀಡಿ ಆಶೀರ್ವದಿಸಿದರು.