ಬ್ರಹ್ಮಾವರ: ಎಸ್ ಎಂ. ಎಸ್ ಕಾಲೇಜು ಬ್ರಹ್ಮಾವರ ಇದರ 43ನೇ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಅಧ್ಯಕ್ಷರಾದ ರೆ.ಫಾ.ಎಮ್.ಸಿ. ಮಥೈ ವಹಿಸಿದ್ದರು.
ಕೊಲ್ಲೂರು ಮೂಕಾಂಬಿಕಾ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಸುಕೇಶ್ ಶೆಟ್ಟಿ ಹೊಸಮಠ ಇವರು ವಿದ್ಯಾರ್ಥಿಗಳ ಪಥಸಂಚಲನಾ ಗೌರವವನ್ನು ಸ್ವೀಕರಿಸಿ, ಕ್ರೀಡಾ ಧ್ವಜಾರೋಹಣೆಗೈದು ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಓ.ಎಸ್ ಸಿ ಎಜ್ಯುಕೇಷನಲ್ ಸೊಸೈಟಿಯ ಕಾಲೇಜು ವಿಭಾಗದ ಕಾರ್ಯದರ್ಶಿಯವರಾದ ಸಿರಿಲ್ ಪಿ ಡಿ’ಸೋಜ, ಕೋಶಾಧಿಕಾರಿಯಾದ ಸ್ಯಾಂಸನ್ ಡಿ’ಸೋಜ, ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಉಡುಪ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ವೆಂಕಟೇಶ್ ಭಟ್, ವಿದ್ಯಾರ್ಥಿ ಕ್ರೀಡಾ ಕಾರ್ಯದರ್ಶಿ ಏರನ್ ರೋಚ್ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ಉಪನ್ಯಾಸಕರಾದ ಭರತ್ ರಾಜ್ ನೇಜಾರ್ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಪ್ರಶಾಂತ್ ವಂದಿಸಿದರು. ವನಿತಾ ಶೆಟ್ಟಿ ಹಾಗೂ ಟ್ವೀನಿ ಮಾರಿಯಾ ರಾಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ತೃತೀಯ ಬಿ.ಸಿ.ಎ ವಿದ್ಯಾರ್ಥಿ ದಿವ್ಯಾಂಶು ಹಾಗೂ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಸೌಜನ್ಯ ಚಾಂಪಿಯನ್ ಗಳಾಗಿ ಹೊರಹೊಮ್ಮಿದರು.