ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಮಾಫಿಯಾ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವತಿಯಿಂದ ಬೃಹತ್ ಪ್ರತಿಭಟನೆ ಶನಿವಾರ ನಗರದ ಕ್ಲಾಕ್ ಟವರ್ ಬಳಿ ನಡೆಯಿತು.
ಯುವಜನರನ್ನು ದಾರಿತಪ್ಪಿಸುತ್ತಿರುವ ಡ್ರಗ್ಸ್ ಮಾಫಿಯಾವನ್ನು ಬುಡ ಸಮೇತ ಕಿತ್ತು ಹಾಕಿ ಸಮಾಜಘಾತಕ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂದು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ನಾಯಕರು ಕರೆ ನೀಡಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಚಿನ್ ಕುಲ್ಲಗೆರೆ, ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಹರ್ಷಿತ್ ಕೊಯ್ಲಾ, ಜಿಲ್ಲಾ ಸಂಚಾಲಕ ಶ್ರೇಯಸ್ ಶೆಟ್ಟಿ, ನಗರ ಕಾರ್ಯದರ್ಶಿ ಶ್ರೀಪಾದ ತಂತ್ರಿ, ತಾಲೂಕ್ ಎಸ್ಎಫ್ಎಸ್ ಪ್ರಮುಖ ಆದಿತ್ಯ ಶೆಟ್ಟಿ, ವಿಭಾಗ ಕಾರ್ಯದರ್ಶಿ ಸ್ಕಂದ ಕಿರಣ್, ವೆಂಕಟೇಶ ತಂತ್ರಿ, ಅಕ್ಷಯ್ ಕೆ., ಕೋಟ್ಯಾನ್, ಶ್ರಾವಣಿ, ಪ್ರಿಯಾ ಕೆ., ಪ್ರಜನ್, ಲೋಹಿತ್, ಪ್ರತಾಪ್, ಶ್ರೇಯಸ್, ಅಖಿಲೇಶ್, ಕಾರ್ತಿಕ್ ಮುಂತಾದವರು ಉಪಸ್ಥಿತರಿದ್ದರು.