ಉಡುಪಿ: ನಮ್ಮ ವಿದ್ಯಾರ್ಥಿಗಳಿಗೆ ಇಂದು ನೀಡುವ ನಾಲ್ಕು ಗೇೂಡೆಯೊಳಗಿನ ಸಾಂಪ್ರದಾಯಿಕ ಶಿಕ್ಷಣ ವಿದ್ಯಾರ್ಥಿಗಳ ವ್ಯಕ್ತಿತ್ವದ ಪರಿಪೂರ್ಣತೆಗೆ ಸಾಕಾಗುವುದಿಲ್ಲ. ಬದುಕಿನ ಸವಾಲುಗಳನ್ನು ಅರಿಯುವ ವಾಸ್ತವಿಕತೆಯನ್ನು ತಿಳಿಸುವ ಶಿಕ್ಷಣ ಇಂದಿನ ಅಗತ್ಯತೆ.
ಇಂತಹ ಬದುಕಿನ ಶಿಕ್ಷಣ ರಾಷ್ಟ್ರೀಯ ಸೇವಾ ಯೇೂಜನ ಕಾರ್ಯಕ್ರಮದಲ್ಲಿ ಸಿಗಲು ಸಾಧ್ಯ. ಹಾಗಾಗಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ಕೂಡ ಈ ಯೇೂಜನಾ ಕಾರ್ಯಕ್ರಮಗಳನ್ನು ಪಠ್ಯದಷ್ಟೇ ಮಹತ್ವದ ಶಿಕ್ಷಣ ಎಂದು ಉಲ್ಲೇಖಿಸಲಾಗಿದೆ ಎಂದು ಅಂಕಣಕಾರ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು
ಅವರು ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೇೂಜನಾ ಘಟಕಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿನ ಸ್ಫರ್ಧಾತ್ಮಕ ಜಗತ್ತನ್ನು ಸಮರ್ಥವಾಗಿ ಎದುರಿಸಲು ನಾವು ಪಡೆಯುವ ಅಂಕಗಳೊಂದೇ ಸಾಕಾಗುವುದಿಲ್ಲ, ಬದಲಾಗಿ ಇಚ್ಛಾಶಕ್ತಿ, ಕೌಶಲಾಶಕ್ತಿ, ಸಂಹನಶಕ್ತಿ ವಿದ್ಯಾರ್ಥಿ ದಿಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ರಘುನಾಥ್ ಕೆ ವಹಿಸಿದ್ದರು. ಕಾನೂನು ಕೇೂಶದ ನಿರ್ದೇಶಕಿ ಡಾ. ನಿರ್ಮಲಾ ಕುಮಾರಿ, ಎನ್.ಎಸ್.ಎಸ್. ಘಟಕದ ಅಧಿಕಾರಿ ಡಾ. ನವೀನ್ಚಂದ್ರ ಸಿ.ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಮತಾ ಕೆ.ಕೆ ಸ್ವಾಗತಿಸಿ, ಪ್ರಜಾಪತಿ ಗೌತಮಿ ಕೆ.ಎಸ್. ಅತಿಥಿಗಳನ್ನು ಪರಿಚಯಿಸಿದರು. ನಮ್ರತಾ ಉಮೇಶ್ ನಾಯ್ಕ ವಂದಿಸಿದರು.