ಉಡುಪಿ: ಉಡುಪಿಯ ಬೆಲ್ ಓ ಸೀಲ್ ವಾಲ್ವ್ಸ್ ಪ್ರೈವೇಟ್ ಲಿಮಿಟೆಡ್, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೂರೈಸುವ ವಿವಿಧ ರೀತಿಯ ಕೈಗಾರಿಕಾ ವಾಲ್ವ್ಸ್ ಗಳ ತಯಾರಕ ಪ್ರಮುಖ ಘಟಕವಾಗಿದೆ. ಕಂಪನಿಯು ಅತ್ಯಂತ ಪ್ರತಿಷ್ಠಿತ, ಡನ್ ಮತ್ತು ಬ್ರಾಡ್ಸ್ಟ್ರೀಟ್ ನ ಬಿಸಿನೆಸ್ ಎಂಟರ್ಪ್ರೈಸಸ್ ಆಫ್ ಟುಮಾರೊ ಪ್ರಕಟನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಡನ್ ಮತ್ತು ಬ್ರಾಡ್ಸ್ಟ್ರೀಟ್ 1841 ರಿಂದ ಜಾಗತಿಕ ಮಟ್ಟದಲ್ಲಿ ಪ್ರಮುಖ ಉದ್ಯಮಗಳ ಡೇಟಾ ಪೂರೈಕೆದಾರರಾಗಿದ್ದು, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ಮೂಲಕ ಸಮೀಕ್ಷೆ ನಡೆಸುತ್ತಿದೆ.
ಎಸ್ಎಂಇಗಳು ಮತ್ತು ಮಧ್ಯಮ ಗಾತ್ರದ ಉದ್ಯಮಗಳು ನಿರ್ವಹಿಸಿದ ನಿರ್ಣಾಯಕ ಪಾತ್ರವನ್ನು ಮತ್ತು ಭಾರತೀಯ ಆರ್ಥಿಕತೆಗೆ ಅವುಗಳ ಕೊಡುಗೆಯನ್ನು ಗುರುತಿಸಲು, ಡನ್ ಮತ್ತು ಬ್ರಾಡ್ಸ್ಟ್ರೀಟ್ನ ಎರಡು ಪ್ರಕಟನೆಗಳಾದ “ಭಾರತದ ಪ್ರಮುಖ ಎಸ್ಎಂಇಗಳು 2022” ಮತ್ತು ‘ಲೀಡಿಂಗ್ ಮಿಡ್-ಕಾರ್ಪೊರೇಟ್ಸ್ ಆಫ್ ಇಂಡಿಯಾ 2022’. ಬಿಡುಗಡೆ ಮಾಡಿದೆ. ಈ ಪ್ರಕಟನೆಗಳುಭಾರತೀಯ ಎಸ್ಎಂಇಗಳು ಮತ್ತು ಮಿಡ್-ಕಾರ್ಪೊರೇಟ್ಗಳ ನಾಡಿಮಿಡಿತ ಮತ್ತು ಕ್ರಿಯಾಶೀಲತೆಯನ್ನು ಸೆರೆಹಿಡಿಯುತ್ತದೆ. ಅಲ್ಲದೆ ವಿವಿಧ ಉದ್ಯಮಗಳ ಪ್ರತಿಷ್ಠಿತ ನಾಯಕರ ಅಭಿಪ್ರಾಯಗಳು ಮತ್ತು ಅವರ ದೃಷ್ಟಿಕೋನವನ್ನು ಸಹ ಒಳಗೊಂಡಿರುತ್ತದೆ.
ಇಮೇಲ್ ಪ್ರಚಾರ, ಆನ್ಲೈನ್ ಮಾಧ್ಯಮ ಮತ್ತು ಆಂತರಿಕ ಡೇಟಾಬೇಸ್ನಂತಹ ಬಹು ಚಾನೆಲ್ಗಳ ಮೂಲಕ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ವಿನಿಮಯ ವೆಬ್ಸೈಟ್ಗಳು ಅಥವಾ ಇತರ ವಿಶ್ವಾಸಾರ್ಹ ಸರ್ಕಾರಿ ವೆಬ್ಸೈಟ್ಗಳಂತಹ ದ್ವಿತೀಯ ಮೂಲದಲ್ಲಿ ಲಭ್ಯವಿರುವ ಹಣಕಾಸಿನ ಮಾಹಿತಿಯನ್ನು ಸಹ ಬಳಸಿ ಸ್ವತಂತ್ರ ಏಜೆನ್ಸಿಯಾದ ಡನ್ ಮತ್ತು ಬ್ರಾಡ್ಸ್ಟ್ರೀಟ್ ನಿಂದ ದೇಶಾದ್ಯಂತ ವಿವಿಧ ಎಸ್ಎಂಇಗಳು ಮತ್ತು ಎಂಎಸ್ಎಂಇಗಳನ್ನು ತಲುಪುವ ಮೂಲಕ ಕಿರುಪಟ್ಟಿಯನ್ನು ಸಿದ್ಧಗೊಳಿಸಿದೆ.
ಬೆಲ್ ಓ ಸೀಲ್ ವಾಲ್ವ್ಸ್ ನ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಕುಮಾರ್ ಸಾಲಿನ್ಸ್ ಅವರು ಮಾಧ್ಯಮ ಪ್ರಕಟನೆಯಲ್ಲಿ, ಬೆಲ್ ಓ ಸೀಲ್ ಭಾರತದ ಪ್ರಮುಖ ಯಲ್ಲೊಂದು ಎಂದು ಪಟ್ಟಿಯಲ್ಲಿ ಸೇರ್ಪಡೆಗೊಳಿಸಿರುವುದರ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಕಳೆದ 30 ವರ್ಷಗಳಲ್ಲಿ ಬೆಲ್ ಓ ಸೀಲ್ನ ಕಾರ್ಯಕ್ಷಮತೆಗೆ ಜಾಗತಿಕವಾಗಿ ದೊರೆತ ದೊಡ್ಡ ಮನ್ನಣೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿನ ಎಸ್ಎಂಇಗಳು ಮತ್ತು ಎಂಎಸ್ಎಂಇಗಳು ದೇಶದ ಜಿಡಿಪಿಯ ಸುಮಾರು 30% ರಷ್ಟು ಕೊಡುಗೆ ನೀಡುತ್ತಿವೆ ಮತ್ತು ನಮ್ಮ ದೇಶಕ್ಕೆ ವಿದೇಶಿ ವಿನಿಮಯದ ಗಣನೀಯ ಒಳಹರಿವಿಗೂ ಕಾರಣವಾಗಿವೆ ಎಂದು ಅವರು ಮಾಹಿತಿ ನೀಡಿದರು. ನಮ್ಮ ಎಸ್ಎಂಇಗಳು ಮತ್ತು ಎಂಎಸ್ಎಂಇಗಳು ದೇಶದ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿವೆ. ಈ ನಿಟ್ಟಿನಲ್ಲಿ ಎಸ್ಎಂಇಗಳು ಮತ್ತು ಎಂಎಸ್ಎಂಇಗಳಿಗೆ ಭಾರತ ಸರ್ಕಾರದ “ಮೇಕ್ ಇನ್ ಇಂಡಿಯಾ” ಮತ್ತು “ಆತ್ಮನಿರ್ಭರ್ ಭಾರತ್” ಮುಖಾಂತರ ಒದಗಿಸಿದ ಎಲ್ಲ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಭಾರತ ಸರ್ಕಾರವನ್ನು ಅವರು ಶ್ಲಾಘಿಸಿದರು.