ಉಡುಪಿ: ನಗರಗಳಿಂದ ದೂರ, ಎತ್ತರದ ಗೋಡೆಗಳ ನಡುವಿನ ಸೈನಿಕನ ಬದುಕಿನ ನೈಜ ಚಿತ್ರಣ ಕಟ್ಟಿ ಕೊಡುವ ಲೇಖಕ ಬೈಂದೂರು ಚಂದ್ರಶೇಖರ ನಾವಡರ ಆತ್ಮ ಕಥನ ‘ಸೈನಿಕನ ಆಂತರ್ಯದ ಪಿಸು ನುಡಿ’ ಜನವರಿ 8 ಭಾನುವಾರ ಬೆಳಿಗ್ಗೆ 11 ಕ್ಕೆ ಶ್ರೀ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಉಪ್ಪುಂದ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಡಾ. ಗೋವಿಂದ ಬಾಬು ಪೂಜಾರಿ ಪುಸ್ತಕ ಲೋಕಾರ್ಪಣೆ ಮತ್ತು ಲೇಖಕಿ ಪೂರ್ಣಿಮಾ ಭಟ್ಟ ಕಮಲಶಿಲೆ ಕೃತಿ ಪರಿಚಯ ಮಾಡಲಿದ್ದಾರೆ.
ಶ್ರೀ ಮಹಾಸತಿ ಅಮ್ಮನವರ ಸೇವಾ ಸಮಿತಿ ಅಧ್ಯಕ್ಷ ನಾಗರಾಜ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸೇನೆಯ ಮೂರೂ ಪಡೆಗಳಲ್ಲಿ ಸೇವೆ ಸಲ್ಲಿಸಿದ ಹೆಗ್ಗಳಿಕೆಯ ಮಾಜಿ ಸೈನಿಕ ಸಾಲಿಗ್ರಾಮದ ಆನರೆರಿ ಲೆಫ್ಟಿನೆಂಟ್ ಗಣೇಶ ಅಡಿಗರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು.
ವೇ. ಮೂ. ಕೃಷ್ಣಮೂರ್ತಿ ನಾವಡ ಮುಖ್ಯ ಅತಿಥಿಯಾಗಿ ಉಪಸ್ಥಿತಲಿರುವರು ಎಂದು ಕಸಾಪ ಬೈಂದೂರು ಅಧ್ಯಕ್ಷ ಡಾ. ರಘು ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.