ಹಾವಂಜೆ: ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಅಸಹಾಯಕರ ಮನೆಯ ಪುನರ್ ರ್ನಿರ್ಮಾಣ ಯೋಜನೆಯ ಭಾಗವಾಗಿ ರೇಖಾ ಕುಕ್ಕಿಹಳ್ಳಿ ಕುಟುಂಬಕ್ಕೆ ಪುನರ್ ನವೀಕರಣಗೊಂಡ ಮನೆ ಹಸ್ತಾಂತರ ಕಾರ್ಯಕ್ರಮ ಶನಿವಾರ ನಡೆಯಯಿತು.
ಹೋಂ ಡಾಕ್ಟರ್ ಫೌಂಡೇಶನ್ ಪ್ರಮುಖರಾದ ಡಾ. ಶಶಿಕಿರಣ್ ಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆಯ ಮೂಲಕ ಇದು 6ನೇ ಮನೆ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಷಯ. ಸಾವಿರಾರು ಸಹೃದಯ ದಾನಿಗಳ ಮೂಲಕ ನಮ್ಮ ಸೇವಾ ಕಾರ್ಯಗಳು ನಡೆಯುತ್ತಿವೆ ಎಂದರು. ಡಾ. ಸುಮಾ ಎಸ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಬಂಗಾರಪ್ಪ,
ಉದಯ್ ನಾಯ್ಕ್, ರಾಘವೇಂದ್ರ ಕರ್ವಾಲು ಮುಂತಾದವರಿದ್ದರು.