Tuesday, November 26, 2024
Tuesday, November 26, 2024

ಹೊಸತನವನ್ನು ಸ್ವಾಗತಿಸುವ ಮನೋಭಾವ ಮೈಗೂಡಿಸಿಕೊಳ್ಳಿ: ಎ.ಎಸ್.ಎನ್. ಹೆಬ್ಬಾರ್

ಹೊಸತನವನ್ನು ಸ್ವಾಗತಿಸುವ ಮನೋಭಾವ ಮೈಗೂಡಿಸಿಕೊಳ್ಳಿ: ಎ.ಎಸ್.ಎನ್. ಹೆಬ್ಬಾರ್

Date:

ಕಾರ್ಕಳ: ವಿದ್ಯಾರ್ಥಿ ಜೀವನ ಮುಗಿಯುವುದಿಲ್ಲ. ಜೀವನದುದ್ದಕ್ಕೂ ಹೊಸತನ್ನು ಸ್ವಾಗತಿಸುವ ಮನೋಭಾವ ಇರಬೇಕು. ಕಣ್ಣು–ಕಿವಿಗಳಿಗೆ ಸದಾ ಕಾತುರತೆ ಇರಬೇಕು. ನಾವೀನ್ಯತೆಯನ್ನು ಸ್ವೀಕರಿಸುವ ಮನೋಭಾವ ಯಾವಾಗ ಚೈತನ್ಯವಾಗಿ ಜೀವಂತವಾಗಿರುತ್ತದೋ ಆತ ಯಶಸ್ವಿಯಾಗಲು ಸಾಧ್ಯ ಎಂದು ಹಿರಿಯ ನ್ಯಾಯವಾದಿ ಎ. ಎಸ್. ಎನ್. ಹೆಬ್ಬಾರ್ ಹೇಳಿದರು.

ಅವರು ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ್ಞಾನ ಸಂಭ್ರಮ-2022 ರಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೈದ್ಯರು ಹಾಗೂ ವಕೀಲರ ವೃತ್ತಿಗೆ ನಿವೃತ್ತಿ ಎಂಬುದಿಲ್ಲ. ಕಾಲಕಾಲಕ್ಕೆ ಕಾನೂನು- ಕಾಯಿದೆಗಳು ಬದಲಾಗುತ್ತಿರುತ್ತದೆ. ಹೊಸ-ಹೊಸ ರೋಗಗಳು ಉಲ್ಬಣಿಸಿದಂತೆ ನವೀನ ಆಲೋಚನೆಗಳಿಗೆ ನಮ್ಮನ್ನು ತೊಡಗಿಸಿಕೊಳ್ಳಬೇಕು, ಪರಿಹಾರ ಕಂಡುಕೊಳ್ಳಬೇಕಾದದ್ದು ಅಗತ್ಯವಾಗಿದೆ.

ಜ್ಞಾನದ ಆಗರದ ಸಾರಸ್ವತ ನೆಲ ನಮ್ಮದು. ನಾಡು ನುಡಿಯ ಬಗ್ಗೆ ನಮಗೆ ಹೆಮ್ಮೆ ಇರಬೇಕು ಎಂದ ಅವರು, ಭಾರತ ವಿಶ್ವಕ್ಕೆ ನೀಡಿದ ಕೊಡುಗೆಯ ಬಗ್ಗೆ ನಾವು ಸದಾ ಋಣಿಯಾಗಿರಬೇಕು. ದೇಶ-ಭಾಷೆಯ ಪ್ರಥಮ ಹೆಜ್ಜೆ ಗುರುತುಗಳನ್ನು ಪ್ರಶಂಸಿಸುತ್ತಾ ಅವರು ಮಾತನಾಡಿದರು.

ಇದೇ ಸಂದರ್ಭ ಕಾಲೇಜಿನ ಡೀನ್ನ್ ಅಕಾಡೆಮಿಕ್ಸ್ ಡಾ. ಮಿಥುನ್ ಹಾಗೂ ಡಾ. ಪ್ರಜ್ವಲ್ ಕುಲಾಲ್‌ರವರ ಪಿ.ಎಚ್.ಡಿ ಮಾರ್ಗದರ್ಶಕಿಯಾದ ಮಂಗಳೂರು ವಿ.ವಿ ರಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ವಿಶಾಲಾಕ್ಷಿ ಬಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಂದನೆಯನ್ನು ಸ್ವೀಕರಿಸಿ ಮಾತನಾಡುತ್ತಾ, ವಿಜ್ಞಾನದ ಹೊಸ ಸಂಶೋಧನೆಯಲ್ಲಿ ನಮ್ಮನ್ನು ಪಳಗಿಸಬೇಕು. ರಾಷ್ಟ್ರ ಮೊದಲು ಅನ್ನುವುದರ ಜೊತೆಗೆ ಚಾರಿತ್ರ್ಯವಂತ ಗುಣವನ್ನು ಹೊಂದಿದ ಘನತೆ ಗೌರವ ವಿದ್ಯಾರ್ಥಿಗಳಲ್ಲಿ ಹೊರಹೊಮ್ಮಬೇಕು.

ಹವ್ಯಾಸವು ಆಸಕ್ತಿಯಾದಾಗ ನಮ್ಮ ಕಾರ್ಯವು ಯಶಸ್ವಿಯಾಗಲು ಸಾಧ್ಯ. ಪ್ರಾಮಾಣಿಕ ಹಾಗೂ ದಕ್ಷ ಉಪನ್ಯಾಸಕರ ದುಡಿಮೆಯಿಂದ ವಿದ್ಯಾರ್ಥಿಗಳನ್ನು ಅತ್ಯುತ್ತಮ ಸ್ಥಾನಗಳಿಗೆ ಕಳುಹಿಸುತ್ತಿರುವ ಜ್ಞಾನಸುಧಾದ
ಬದ್ಧತೆಯ ಕಾರ್ಯವೈಖರಿ ಅಭಿನಂದನೀಯ ಎಂದು ಪ್ರಶಂಶಿಸಿದರು.

ಇದೇ ಸಂದರ್ಭ 2021-22ನೇ ಸಾಲಿನ ಶೈಕ್ಷಣಿಕ ಕ್ಷೇತ್ರದ ಸಾಧಕರನ್ನು ಹಾಗೂ 2022-23ನೇ ಸಾಲಿನ ರಾಷ್ಟ್ರ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಗೊಂಡ ೨೬ ಸಾಧಕ ಕ್ರೀಡಾಪಟುಗಳನ್ನು ಹಾಗೂ ಮೂವರು ಸಾಂಸ್ಕೃತಿಕ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ಡೀನ್ ಅಕಾಡೆಮಿಕ್ಸ್ ಡಾ.ಮಿಥುನ್ ಯು., ಡೀನ್ ಸ್ಟೂಡೆಂಟ್ಸ್ ಅಫರ್ಸ್ ಶಕುಂತಲಾ ಎಂ.ಸುವರ್ಣ, ಜ್ಞಾನಸುಧಾ
ಎಂಟ್ರೆನ್ಸ್ ಅಕಾಡೆಮಿ ಸಂಯೋಜಕ ಸಂದೀಪ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲದಿನೇಶ್ ಎಂ.ಕೊಡವೂರ್ ವಾರ್ಷಿಕ ವರದಿಯನ್ನು ವಾಚಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಹೆಗ್ಡೆ ಕ್ರೀಡಾ ಸಾಧಕರ, ಅರ್ಥಶಾಸ್ತ್ರ ಉಪನ್ಯಾಸಕಿ
ಸುಮಿತ್ರಾ ಸಾಂಸ್ಕೃತಿಕ ಸಾಧಕರ, ಗಣಿತಶಾಸ್ತ್ರ ಉಪನ್ಯಾಸಕಿ ಅಶ್ವಿನಿ ಶೈಕ್ಷಣಿಕ ಸಾಧಕರ ಪಟ್ಟಿಯನ್ನು ವಾಚಿಸಿದರು.

ಉಪಪ್ರಾಂಶುಪಾಲರಾದ ಸಾಹಿತ್ಯ ಸ್ವಾಗತಿಸಿ, ಪಿ.ಆರ್..ಒ. ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು. ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!