Tuesday, September 24, 2024
Tuesday, September 24, 2024

ಮಕ್ಕಳ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

ಮಕ್ಕಳ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

Date:

ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಹಾಗೂ ಆರ್. ವಿ ಕನ್ಸ್ಟ್ರಕ್ಷನ್ಸ್ ಸಹಯೋಗದೊಂದಿಗೆ ಮಕ್ಕಳ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಅಂಬಲಪಾಡಿ ಶ್ರೀ ದೇವಳದ ಭವಾನಿ ಮಂಟಪದಲ್ಲಿ ನಡೆಯಿತು.

ಮಕ್ಕಳ ತುಂಟಾಟವನ್ನು ಸೆರೆ ಹಿಡಿದು, ದಾಖಲೀಕರಿಸುವ ಮೂಲಕ ಜೀವನದುದ್ದಕ್ಕೂ ಸವಿನೆನಪನ್ನು ಮರುಕಳಿಸುವಂತೆ ಮಾಡುವವರು ಛಾಯಾಗ್ರಾಹಕರು ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಉಡುಪಿ ಶಾಖೆಯ ಪ್ರಬಂಧಕ ರಾಘವೇಂದ್ರ ಉಪಾಧ್ಯಾಯ ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಸಹಕಾರ ರತ್ನ ಪುರಸ್ಕೃತರಾದ ಜಯಕರ ಇಂದ್ರಾಳಿ, ಮಹಾಲಕ್ಷ್ಮೀ ಬ್ಯಾಂಕ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ , ಜಿಲ್ಲಾ ಕಾರ್ಯದರ್ಶಿ ವಾಮನ ಪಡುಕರೆ, ಉಪಾಧ್ಯಕ್ಷ ಸುರಭಿ ರತನ್, ಕಾರ್ಯಕ್ರಮ ಸಂಚಾಲಕ ಸಂತೋಷ್ ಕೋರಂಗ್ರಪಾಡಿ ಉಪಸ್ಥಿತರಿದ್ದರು.

ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರವೀಣ್ ಕೋರೆಯ ಸ್ವಾಗತಿಸಿದರು. ದಿವಾಕರ್ ಹಿರಿಯಡ್ಕ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಸರಾ ಸಮಯದಲ್ಲಿ ಕಾವೇರಿ ಐದನೇ ಹಂತಕ್ಕೆ ಚಾಲನೆ: ಡಿಕೆಶಿ

ಬೆಂಗಳೂರು, ಸೆ.24: ಬೆಂಗಳೂರು ನಗರದ ಮೂಲೆ ಮೂಲೆಗೂ ಕಾವೇರಿ ನೀರನ್ನು ತಲುಪಿಸುವ...

ನೂತನ ಆ್ಯಂಬುಲೆನ್ಸ್‌ಗಳಿಗೆ ಚಾಲನೆ

ಬೆಂಗಳೂರು, ಸೆ.24: ರಸ್ತೆ ಅಪಾಘಾತಕ್ಕೀಡಾದವರಿಗೆ ಗೋಲ್ಡನ್ ಅವರ್‌ ಒಳಗಾಗಿ ಚಿಕಿತ್ಸೆ ದೊರಕಿಸಿಕೊಡುವ...

ಸೆ.26: ಕೆಎಚ್‌ಐಆರ್‌ ಸಿಟಿ ಮೊದಲ ಹಂತಕ್ಕೆ ಚಾಲನೆ

ಬೆಂಗಳೂರು, ಸೆ.24: ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರಗಳು ಒಂದೆಡೇ...

ಸುದ್ದಿಗಳ ಫ್ಯಾಕ್ಟ್ ಚೆಕ್ ಮಾಡಲು ಠಾಣೆಗಳಲ್ಲಿ ಪ್ರತ್ಯೇಕ ತಂಡ

ಬೆಂಗಳೂರು, ಸೆ.24: ಫೇಕ್‌ ನ್ಯೂಸ್‌ ಸೃಷ್ಟಿಕರ್ತರಿಗೆ ಕಠಿಣ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ...
error: Content is protected !!