ಉಡುಪಿ: ಹಾವೇರಿಯಲ್ಲಿ ಜನವರಿ 6,7,8 ರಂದು ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರುಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರತಿನಿಧಿ ನೋಂದಣಿ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಲಾಗಿರುತ್ತದೆ.
ಪ್ರತಿನಿಧಿಗಳಾಗ ಬಯಸುವವರು ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಅಧ್ಯಕ್ಷರು ಹಾಗೂ ಆಯಾ ತಾಲ್ಲೂಕಿನ ಅಧ್ಯಕ್ಷರುಗಳನ್ನು ದಿನಾಂಕ: 25-12-2022 ರೊಳಗೆ ಸಂಪರ್ಕಿಸಿ ರೂ 500 ಶುಲ್ಕವನ್ನು ಪಾವತಿಸಿ ರಶೀದಿಯನ್ನು ಪಡೆದು ನೊಂದಾಯಿಸಲು ಈ ಮೂಲಕ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- ನೀಲಾವರ ಸುರೇಂದ್ರ ಅಡಿಗ ಜಿಲ್ಲಾಧ್ಯಕ್ಷರು- 9242139645, ರವಿರಾಜ್ ಎಚ್ ಪಿ ಉಡುಪಿ ತಾಲೂಕು ಅಧ್ಯಕ್ಷರು- 9845240309