Wednesday, September 25, 2024
Wednesday, September 25, 2024

ಡಿ. 18- ‘ದ ರಾಯೋ ಮಾಬೆನ್’ ಸ್ಟುಡಿಯೋ ಶುಭಾರಂಭ

ಡಿ. 18- ‘ದ ರಾಯೋ ಮಾಬೆನ್’ ಸ್ಟುಡಿಯೋ ಶುಭಾರಂಭ

Date:

ಉಡುಪಿ: ಉಡುಪಿ-ಮಣಿಪಾಲ ರಸ್ತೆಯ ಲಕ್ಷ್ಮೀಂದ್ರನಗರದ ಪ್ರೀಮಿಯರ್ ಅಪ್ ಟೌನ್ ನಲ್ಲಿ ಯುವ ಉದ್ಯಮಿ ರಾಯೋ ಮಾಬೆನ್ ಅವರು ನೂತನವಾಗಿ ಆರಂಭಿಸಿರುವ ‘ದ ರಾಯೋ ಮಾಬೆನ್’ ಸ್ಟುಡಿಯೋ ಇದರ ಉದ್ಘಾಟನಾ ಸಮಾರಂಭ ಡಿಸೆಂಬರ್ 18 ರಂದು ನಡೆಯಲಿದೆ.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸೆಲೆಬ್ರಿಟಿ ಛಾಯಾಗ್ರಾಹಕ ಮತ್ತು ನಿರ್ದೇಶಕ ಸುಬಿ ಸ್ಯಾಮ್ವೆಲ್, ಯೋಗ ತರಬೇತುದಾರರಾದ ಸಂಧ್ಯಾ ಕಾಮತ್, ಬೆಲ್-ಓ-ಸೀಲ್ ವ್ಯಾಲ್ವ್ಸ್ ನಿರ್ದೇಶಕಿ ಸಪ್ನಾ ಸ್ಯಾಲಿನ್ಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮಣಿಪಾಲ ಮಾಹೆಯಲ್ಲಿ ಫ್ಯಾಶನ್ ಡಿಸೈನಿಂಗ್ ಅಧ್ಯಯನ ನಡೆಸಿರುವ ರಾಯೋ ಮಾಬೆನ್, ವಸ್ತ್ರವಿನ್ಯಾಸ, ಕಸೂತಿಯಲ್ಲಿ ತನ್ನ ಕೌಶಲ್ಯ ಮತ್ತು ಸೃಜನಶೀಲತೆಯಿಂದ ರಾಜ್ಯದಾದ್ಯಂತ ಪ್ರಖ್ಯಾತಿಯನ್ನು ಗಳಿಸಿದ್ದಾರೆ.

ಆನ್ ಲೈನ್ ನಲ್ಲಿ 2018 ರಲ್ಲಿ ಆರಂಭವಾದ ‘ದ ರಾಯೋ ಮಾಬೆನ್’ ಫ್ಯಾಶನ್ ಡಿಸೈನಿಂಗ್ ನಲ್ಲಿ ಹಲವು ಸಾಧನೆಗಳನ್ನು ನಡೆಸಿದ್ದು ಮಾತ್ರವಲ್ಲದೇ ಹಲವಾರು ಬ್ರ್ಯಾಂಡ್ ಗಳಿಗೆ ಪ್ರದರ್ಶನ ಸಂಘಟಿಸುವಲ್ಲಿ ಇವರು ಸಹಕರಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೈಸೂರು ಸಂಸ್ಥಾನದ ಕೊಡುಗೆ ಅಪಾರ: ಧರ್ಮೇಂದ್ರ ಕುಮಾರ್

ವಿದ್ಯಾಗಿರಿ, ಸೆ.25: ಕಡ್ಡಾಯ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಜಾರಿ ಹೆಣ್ಣುಮಕ್ಕಳಿಗೆ...

ರಾಜ್ಯದ ಪ್ರಪ್ರಥಮ ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್‌ ಸ್ಥಾವರ ಲೋಕಾರ್ಪಣೆ

ಬೆಂಗಳೂರು, ಸೆ.25: ರಾಜ್ಯದ ಪ್ರಪ್ರಥಮ 370 ಮೆಗಾವ್ಯಾಟ್‌ ಸಾಮರ್ಥ್ಯದ ನೈಸರ್ಗಿಕ ಅನಿಲ...

ಕಾನೂನು ಸಚಿವರನ್ನು ಭೇಟಿಯಾದ ಉಡುಪಿ ವಕೀಲರ ಸಂಘದ ನಿಯೋಗ

ಉಡುಪಿ, ಸೆ.24: ಉಡುಪಿ ವಕೀಲರ ಸಂಘದ ನಿಯೋಗವು ಕರ್ನಾಟಕ ರಾಜ್ಯದ ಕಾನೂನು...

ಕಾನೂನು ಹೋರಾಟದ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ.24: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಎನ್‌ಎಸ್‌ಎಸ್ 218ರ ಹಾಗೂ ಪಿಸಿ...
error: Content is protected !!