ಉಡುಪಿ: ಜನವರಿ ತಿಂಗಳಲ್ಲಿ ಕೊಡವೂರು ದೇವಳದಲ್ಲಿ ನಡೆಸಲು ಉದ್ದೇಶಿಸಿರುವ ಭಾಗವತ ಸಪ್ತಾಹದ ಪ್ರವಚನ ನಡೆಸಿಕೊಡುವಂತೆ ಮತ್ತು ನವೀಕೃತ ವಸಂತ ಮಂಟಪದ ಮೇಲ್ಛಾವಣಿಯ ಉದ್ಘಾಟನೆಯನ್ನು ನಡೆಸಿಕೊಡುವಂತೆಯೂ ಪಲಿಮಾರು ಉಭಯ ಮಠಾಧೀಶರನ್ನು ಕೇಳಿಕೊಳ್ಳಲಾಯಿತು.
ಶಾಸಕ ಕೆ. ರಘುಪತಿ ಭಟ್, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸಾಧು ಸಾಲ್ಯಾನ್, ಸುಧೀರ್ ರಾವ್ ಕೊಡವೂರು, ಜೀವನ್ ಪಾಳೆಕಟ್ಟೆ, ಪೂರ್ಣಿಮಾ ಜನಾರ್ದನ್, ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ, ಲಕ್ಷ್ಮೀನಾರಾಯಣ ಭಟ್, ಚಂದ್ರಶೇಖರ ರಾವ್, ಶ್ರೀನಿವಾಸ ಬಾಯರಿ, ಶಿವರಾಜ್ ಉಪಸ್ಥಿತರಿದ್ದರು.