ಬೆಂಗಳೂರು: ಹೊಸ ವರ್ಷಕ್ಕೆ ವಿದ್ಯುತ್ ದರ ಇಳಿಕೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಇಂಧನ ಸಚಿವ ವಿ.ಸುನೀಲ್ ಕುಮಾರ್ ವಿದ್ಯುತ್ ದರ ಕಡಿತ ಪ್ರಸ್ತಾವನೆ ಸಿದ್ಧಪಡಿಸುವಂತೆ ಇಲಾಖೆಗೆ ಸೂಚನೆ ನೀಡಿದ್ದು ಇಲಾಖೆಯಿಂದ ವಿದ್ಯುತ್ ದರ ಇಳಿಕೆಯ ಪ್ರಸ್ತಾವನೆಯನ್ನು ಎಲ್ಲಾ ಎಸ್ಕಾಂಗಳು ಸಿದ್ಧಪಡಿಸಿ ಕೆ ಇ ಆರ್ ಸಿಗೆ ಸಲ್ಲಿಸಿವೆ ಎನ್ನಲಾಗುತ್ತಿದೆ.
ಗೃಹಬಳಕೆ, ಹೆಚ್ ಟಿ, ಕೈಗಾರಿಕೆ, ವಾಣಿಜ್ಯ ಹಾಗೂ ಎಲ್ ಟಿ ಗ್ರಾಹಕರ ವಿದ್ಯುತ್ ದರ ಇಳಿಕೆ ಆಗಲಿದೆ ಎನ್ನಲಾಗಿದೆ.ಗೃಹ ಬಳಕೆ ಸೇರಿದಂತೆ ಎಲ್ಲಾ ರೀತಿಯ ಗ್ರಾಹಕರಿಗೆ ದರ ಇಳಿಕೆಯಿಂದ ಅನುಕೂಲವಾಗಲಿದೆ. ಪ್ರತಿ ಯೂನಿಟ್ ಗೆ 70 ಪೈಸೆಯಿಂದ 2 ರೂವರೆಗೆ ಶುಲ್ಕ ಇಳಿಕೆ ಆಗುವ ಸಾಧ್ಯತೆಯಿದೆ.