ಬ್ರಹ್ಮಾವರ: ಭಾರತೀಯ ಸಂವಿಧಾನ ಈ ನೆಲದ ಪವಿತ್ರವಾದ ಗ್ರಂಥ. ಜಾತಿ ಧರ್ಮ ಪ್ರಾದೇಶಿಕತೆಗಳ ಎಲ್ಲೆ ಮೀರಿ ನಿಂತ ಜೀವಂತಿಕೆಯ ಗ್ರಂಥ. ಹಾಗಾಗಿ ಯಾವುದೇ ಜಾತಿ, ಧರ್ಮ, ವ್ಯಕ್ತಿಗಳಿಗೆ ಸಮಪ೯ಣೆ ಮಾಡಿಕೊಳ್ಳದೆ ಲೇೂಕಾರ್ಪಣೆ ಮಾಡಿ ಸಂವಿಧಾನದ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಅಂಕಣಕಾರ ರಾಜಕೀಯ ವಿಶ್ಲೇಷಕ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.
ಬ್ರಹ್ಮಾವರ ಎಸ್.ಎಂ.ಎಸ್.ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡ ಸಂವಿಧಾನ ದಿನಾಚರಣೆಯ ಪ್ರಯುಕ್ತ ಸಮಾರೇೂಪ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ್ ಉಡುಪ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಮಮತಾ ಮೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.